Tuesday, May 14, 2024
Homeಕರಾವಳಿಮಂಗಳೂರು ನಗರ ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ವಾಟ್ಸಾಪ್ ಖಾತೆ; ಮೆಸೇಜ್, ಕಾಲ್ ಮೂಲಕ ಹಣಕ್ಕೆ...

ಮಂಗಳೂರು ನಗರ ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ವಾಟ್ಸಾಪ್ ಖಾತೆ; ಮೆಸೇಜ್, ಕಾಲ್ ಮೂಲಕ ಹಣಕ್ಕೆ ಬೇಡಿಕೆ

spot_img
- Advertisement -
- Advertisement -

ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಹೆಸರಿನಲ್ಲಿ ನಕಲಿ ವಾಟ್ಸಾಪ್ ಖಾತೆಯೊಂದು ಸೃಷ್ಟಿಯಾಗಿದ್ದು, ಈ ಖಾತೆ ಮುಖೇನ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಹೆಸರಿನಲ್ಲಿ  8319051976 ನಂಬರ್ ನಲ್ಲಿ ವಾಟ್ಸಪ್ ಖಾತೆ ತೆರೆದು ಕಮೀಷನರ್ ಫೋಟೋವನ್ನು ಡಿ.ಪಿ.ಗೆ ಹಾಕಿಕೊಂಡು ವಂಚಿಸುವ ಪ್ರಯತ್ನವಾಗಿದೆ.

ನಕಲಿ ಖಾತೆಯನ್ನು ಸೃಷ್ಟಿಸಿರುವ ವಂಚಕನು ಅನುಪಮ್ ಅಗ್ರವಾಲ್ ಹೆಸರನ್ನು ಬಳಸಿ, ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ. ನನ್ನ UPI ವರ್ಕ್ ಆಗುತ್ತಿಲ್ಲ. ತುರ್ತಾಗಿ ಹಣ ಬೇಕಾಗಿದ್ದು, ಹಣ ವರ್ಗಾವಣೆ ಮಾಡುವಂತೆ ಸಂದೇಶ ರವಾನಿಸುತ್ತಿದ್ದಾನೆ. ಇದರ ಜೊತೆಗೆ ಒಂದು ಗಂಟೆಯೊಳಗೆ ವಾಪಸು ಹಣ ಹಾಕುವ ಭರವಸೆಯನ್ನು ವಂಚಕ ನೀಡಿದ್ದಾನೆ. ಮೆಸೇಜ್ ಮಾತ್ರವಲ್ಲದೇ ವಾಯ್ಸ್ ಕಾಲ್ ಸಹ ಮಾಡಿದ್ದಾನೆ.

ಇನ್ನು ಈ ವಿಚಾರವನ್ನು ತಿಳಿದ ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಇದು ನಕಲಿ ಖಾತೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೊಂದು ಫೇಕ್ ಕಾಲ್ ಆಗಿದ್ದು, ಇದಕ್ಕೆ ಯಾರು ಕೂಡಾ ಪ್ರತಿಕ್ರಯಿಸದಂತೆ ಕೇಳಿಕೊಂಡಿದ್ದಾರೆ.

ಟ್ರೂ ಕಾಲರ್ ನಲ್ಲಿ ಈ ನಕಲಿ ನಂಬರ್ ಚಕ್ರವರ್ತಿ ಎಂಬ ಹೆಸರನ್ನು ಸೂಚಿಸುತ್ತಿದ್ದು, ಪೊಲೀಸ್ ಕಮೀಷನ‌ರ್ ಸೂಚನೆ ಮೇರೆಗೆ ಸೈಬರ್ ಕ್ರೈಮ್‌ ಪೊಲೀಸರು ನಕಲಿ ಖಾತೆಯ ಹಿಂದಿರುವ ವಂಚಕನನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ನಕಲಿ ಖಾತೆಯನ್ನು ಸೃಷ್ಟಿಸುತ್ತಿರುವ ವಂಚಕರ ಬಗ್ಗೆ ಎಚ್ಚರಿಕೆಯಿಂದಿರುವ ಅಗತ್ಯವಿದೆ.

- Advertisement -
spot_img

Latest News

error: Content is protected !!