Thursday, June 4, 2026
Homeಕರಾವಳಿಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್.ಐ.ಆರ್; ಕಲೆಕ್ಷನ್ ಮಾಸ್ಟರ್ ಎಂದು ಎಡಿಟ್ ಮಾಡಿ ಫೇಸ್ಬುಕ್...

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್.ಐ.ಆರ್; ಕಲೆಕ್ಷನ್ ಮಾಸ್ಟರ್ ಎಂದು ಎಡಿಟ್ ಮಾಡಿ ಫೇಸ್ಬುಕ್ ನಲ್ಲಿ ವೈರಲ್

- Advertisement -
- Advertisement -

ಬೆಳ್ತಂಗಡಿ : COLLECTION MASTER ಅಂತಾ ನಾಮಫಲಕ ಇರೋ ಫೋಟೊವನ್ನು ಎಡಿಟ್ ಮಾಡಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಶಾಸಕ ಹರೀಶ್ ಪೂಂಜ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಸಿಎಂ ಕಚೇರಿ ಹಾಗೂ ಗೃಹಕಚೇರಿ ಕಾವೇರಿ ನಿವಾಸದ ಗೇಟ್ ನಲ್ಲೂ ಅದೇ ರೀತಿ ಸಿಎಂ ಸಿದ್ದರಾಮಯ್ಯ ಫೋಟೊ ಎಡಿಟ್ ಮಾಡಿ ವೈರಲ್ ಮಾಡಿದ್ದ ಬಿಜೆಪಿ ಶಾಸಕ ಹರೀಶ್ ಪೂಂಜ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆ.26 ರಂದು IPC 1869 U/S 504, 505(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಶೇಖರ್ ಕುಕ್ಕೆಡಿ ನೀಡಿದ್ದ ದೂರಿನ ಆಧಾರದಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ.

- Advertisement -

Latest News

error: Content is protected !!