- Advertisement -
![]()
- Advertisement -
ಬೆಳ್ತಂಗಡಿ: ;ಚಾರ್ಮಾಡಿ ಘಾಟ್ ನಲ್ಲಿ ಕಳೆದ ಕೆಲವು ದಿನಗಳಿಂದ ಒಂಟಿ ಸಲಗದ ಕಾಟ ಜೋರಾಗಿದ್ದು ವಾಹನ ಸವಾರರು ಸುಸ್ತಾಗಿ ಹೋಗಿದ್ದಾರೆ. ನಿನ್ನೆ ಮತ್ತೆ ರಾತ್ರಿ ವೇಳೆ ಚಾರ್ಮಾಡಿ ಘಾಟ್ ನ 9ನೇ ತಿರುವಿನಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದೆ.
ಇದರಿಂದಾಗಿ ಪ್ರತಿ ದಿನ ವಾಹನ ಸವಾರರು ಭಯದಲ್ಲೇ ಓಡಾಡುವಂತಾಗಿದೆ. ದೊಡ್ಡ-ದೊಡ್ಡ ವಾಹನಗಳಂತೂ ಮುಂದೆ ಸಾಗಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ದಿನದಿಂದ ನಿರಂತರವಾಗಿ ರಸ್ತೆಯಲ್ಲಿ ಕಾಣಿಸಿಕೊಳ್ತಾ ಇರೋ ಕಾಡಾನೆಯನ್ನು ಸ್ಥಳಾಂತರಿಸಲು ವಾಹನ ಸವಾರರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.
- Advertisement -


