Saturday, October 17, 2026
Homeಕರಾವಳಿಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿ ಹುಚ್ಚಾಟ: ಬೆಳ್ಳಾರೆಯ ಕಾವಿನಮೂಲೆಯಲ್ಲಿ ಕೊರೊನಾ ಸ್ಫೋಟ ಎಂದು ಸುಳ್ಳು ಸುದ್ದಿ ಹರಿಬಿಟ್ಟ...

ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿ ಹುಚ್ಚಾಟ: ಬೆಳ್ಳಾರೆಯ ಕಾವಿನಮೂಲೆಯಲ್ಲಿ ಕೊರೊನಾ ಸ್ಫೋಟ ಎಂದು ಸುಳ್ಳು ಸುದ್ದಿ ಹರಿಬಿಟ್ಟ ಪುಂಡರು

- Advertisement -
- Advertisement -

ಬೆಳ್ಳಾರೆ: ಕೊರೊನಾ ಹಳ್ಳಿ ಹಳ್ಳಿಗೂ ಕಾಲಿಟ್ಟು ಸಾವು ನೋವಿಗೆ ಕಾರಣವಾಗುತ್ತಿದೆ. ಹೀಗಿರುವಾಗಲೇ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ  ಕೊರೊನಾ ಮಹಾಸ್ಫೋಟ ಎಂದು ಕಿಡಿಗೇಡಿಗಳು ಸುಳ್ಳು ಸುದ್ದಿಯೊಂದನ್ನು ಹರಿಬಿಟ್ಟಿದ್ದಾರೆ.

ಹೌದು…. ಟಿವಿ9 ವಾಹಿನಿ ಬ್ರೇಕಿಂಗ್ ಪ್ಲೇಟ್ ನ ಎಡಿಟ್ ಮಾಡಿ ಅದರಲ್ಲಿ ಬೆಳ್ಳಾರೆಯಲ್ಲಿ ಕೊರೊನಾ ಸ್ಫೋಟ ಕಾವಿನಮೂಲೆ ಮೋರಿಯಲ್ಲಿ ಕುಳಿತುಕೊಳ್ಳುವ ಹುಡುಗರೇ ಸೋಂಕು ಹರಡಲು ಕಾರಣ ಎಂದು ಬರೆದಿದ್ದಾರೆ ಇದು ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದೆ. ಇನ್ನು ಇದು ವಾಟ್ಸಾಫ್ ನಲ್ಲಿ  ವೈರಲ್ ಆಗುತ್ತಿದ್ದಂತೆ ಸ್ಥಳೀಯರಲ್ಲಿ ಕೆಲಕಾಲ ಆತಂಕ ಉಂಟಾಗಿತ್ತು.  

 ಆದರೆ ಆ ಬಳಿಕ ಇದು ಕಿಡಿಗೇಡಿಗಳ ಹುಚ್ಚಾಟ ಅನ್ನೋದು ಗೊತ್ತಾಗಿದೆ. ಆದ್ರೆ ವಿಚಾರ ಸರಿಯಾಗಿ ತಿಳಿದುಕೊಳ್ಳದೇ ಅನೇಕರು ತಮ್ಮ ತಮ್ಮ ವಾಟ್ಸಾಫ್ ಸ್ಟೇಟಸ್ ಗಳಲ್ಲಿ ಹಾಕಿಕೊಂಡಿದ್ದರು.

- Advertisement -

Latest News

error: Content is protected !!