Wednesday, June 3, 2026
Homeಕರಾವಳಿಮಾಸ್ಕ್ ಧರಿಸದೆ ಪಿಡಿಓ ಜೊತೆ ವಾಗ್ವಾದ : ಮಂಗಳೂರಿನಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲು

ಮಾಸ್ಕ್ ಧರಿಸದೆ ಪಿಡಿಓ ಜೊತೆ ವಾಗ್ವಾದ : ಮಂಗಳೂರಿನಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಮಂಗಳೂರು: ಮಾಸ್ಕ್ ಧರಿಸದ್ದಕ್ಕೆ ಪ್ರಶ್ನಿಸಿದ್ದಕ್ಕೆ ಪಿಡಿಓ  ಜೊತೆ ವಾಗ್ವಾದಕ್ಕೆ ಇಳಿದ ಯುವಕನ ವಿರುದ್ಧ ಪ್ರಕರಣ ದಾಖಲಿಸಿದ ಘಟನೆ  ಮಂಗಳೂರು ನಗರದ ಕಿನ್ಯಾ ಗ್ರಾಮದ ಬೆಳರಿಂಗೆ ಎಂಬಲ್ಲಿ ನಡೆದಿದೆ. ಯುವಕನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಕಿರ್ ಎಂಬಾತ ಮಾಸ್ಕ್ ಧರಿಸದೇ ಕರ್ತವ್ಯಕ್ಕೆ ಅಡ್ಡಿಪಡಿಸಿದಾತ. ಪಿಡಿಓ ಪರಿಶೀಲನೆಗೆ ಬಂದಾಗ ‌ಮಾಸ್ಕ್ ಧರಿಸದೇ ಕೆಲವರು ಕುಳಿತಿದ್ದರು. ಈ ಹಿನ್ನೆಲೆ ಪಿಡಿಓ ಎಲ್ಲರಿಗೂ ಮಾಸ್ಕ್ ಧರಿಸುವಂತೆ ಎಚ್ಚರಿಸಿದ್ದಾರೆ. ಆದರೆ ಶಾಕಿರ್ ‘ನಾನು ಮಾಸ್ಕ್ ಧರಿಸುವುದಿಲ್ಲ. ಇದು ನನ್ನ ಮನೆಯ ಅಂಗಳ, ಇಲ್ಲಿ ನಾನು ಹೇಗೆ ಬೇಕಾದರೂ ಇರುತ್ತೇನೆ. ನೀವು ಯಾರು ಕೇಳಲಿಕ್ಕೆ ಎಂದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ.

ಈ ಹಿನ್ನೆಲೆ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಕಾನೂನನ್ನು ಉಲ್ಲಂಘಿಸಲಾಗಿದೆ ಎಂದು ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!