- Advertisement -
- Advertisement -
ಉಡುಪಿ: ಮುಸುಕುಧಾರಿಗಳು ಅಪಾರ್ಟ್ ಮೆಂಟ್ ಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಉಡುಪಿ ನಗರದಲ್ಲಿ ನಡೆದಿದೆ.
ಉಡುಪಿ ನಗರದ ಬ್ರಹ್ಮಗಿರಿಯ ಅಪಾರ್ಟ್ ಮೆಂಟ್ ನಲ್ಲಿ ಕಳ್ಳತನಕ್ಕೆ ನಾಲ್ವರು ಮುಸುಕುಧಾರಿಗಳು ವಿಫಲ ಯತ್ನ ನಡೆಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ನಿನ್ನೆ ಮುಂಜಾನೆ ಈ ಕೃತ್ಯ ನಡೆದಿದ್ದು, ಕಬ್ಬಿಣದ ಸಲಾಕೆಯಿಂದ ಫ್ಲ್ಯಾಟ್ ಬಾಗಿಲು ಒಡೆಯಲು ವಿಫಲ ಯತ್ನ ನಡೆಸಲಾಗಿದೆ.
ಉಡುಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬ್ರಹ್ಮಗಿರಿ ಭಾಗದ ಮೂರು ಅಪಾರ್ಟ್ ಮೆಂಟ್ ಗಳಲ್ಲಿ ಈ ತಂಡ ಕಳ್ಳತನಕ್ಕೆ ಯತ್ನಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
- Advertisement -