Thursday, June 4, 2026
Homeಕರಾವಳಿಮಂಗಳೂರುಉಳ್ಳಾಲ: ಮನೆಯವರು ಒಳಗಿದ್ದಾಗಲೇ ಮಹಡಿ ಕುಸಿತ; ಹೊರೆಗ‌ ಓಡಿ ಅಪಾಯದಿಂದ ಪಾರಾದ ಮನೆಯವರು

ಉಳ್ಳಾಲ: ಮನೆಯವರು ಒಳಗಿದ್ದಾಗಲೇ ಮಹಡಿ ಕುಸಿತ; ಹೊರೆಗ‌ ಓಡಿ ಅಪಾಯದಿಂದ ಪಾರಾದ ಮನೆಯವರು

- Advertisement -
- Advertisement -

ಉಳ್ಳಾಲ: ಮನೆಯವರು ಇದ್ದಾಗಲೇ ಮನೆಯ ಮಹಡಿ ಕುಸಿದು ಬಿದ್ದು ಮನೆಯಲ್ಲಿದ್ದವರು ಪಾರಾಗಿರುವ ಘಟನೆ ಉಳ್ಳಾಲ ತಾಲೂಕಿನಲ್ಲಿ ಸಂಭವಿಸಿದೆ.ಉಳ್ಳಾಲ ತಾಲೂಕಿನ ಮೇಲಂಗಡಿ ಮಸೀದಿ ಸಮೀಪ ಅವಘಡ ಸಂಭವಿಸಿದ್ದು, ಅಬ್ಬಾಸ್ ಎಂಬವರ ಮನೆ ಕುಸಿತಗೊಂಡಿದೆ.

ಮನೆಯವರು ಮನೆಯ ಒಳಗಿದ್ದ ವೇಳೆಯಲ್ಲೇ ಮಹಡಿ ಕುಸಿದಿದ್ದು, ಮಾಡಿನ ಹಂಚುಗಳು ಬೀಳಲು ಪ್ರಾರಂಭವಾಗುತ್ತಿದ್ದಂತೆಯೇ ಮನೆಯ ಹೊರಗೆ ಓಡಿ ಬಂದು ಪಾರಾಗಿದ್ದಾರೆ.

ಅಬ್ಬಾಸ್, ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಹೊರಗೆ ಓಡಿ ಬಂದು ಅಪಾಯದಿಂದ ಪಾರಾಗಿದ್ದಾರೆ. ಆದರೆ ಈ ವೇಳೆ ಅಬ್ಬಾಸ್ ಹಾಗೂ ಅವರ ಪುತ್ರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗಿದೆ

- Advertisement -

Latest News

error: Content is protected !!