Wednesday, June 3, 2026
Homeತಾಜಾ ಸುದ್ದಿಕಾಪಿರೈಟ್ಸ್ ಉಲ್ಲಂಘನೆ ಪ್ರಕರಣ; ಕೋರ್ಟ್ ಗೆ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದ ನಟ, ನಿರ್ದೇಶಕ ರಕ್ಷಿತ್...

ಕಾಪಿರೈಟ್ಸ್ ಉಲ್ಲಂಘನೆ ಪ್ರಕರಣ; ಕೋರ್ಟ್ ಗೆ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ

- Advertisement -
- Advertisement -

ಬೆಂಗಳೂರು :ನಟ,ನಿರ್ದೇಶಕ ರಕ್ಷಿತ್ ಶೆಟ್ಟಿ ತಮ್ಮ ವಿರುದ್ಧ ದಾಖಲಾದ ಕಾಪಿರೈಟ್ಸ್ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಯಶವಂತಪುರ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು.

ವಿಚಾರಣೆ ಬಳಿಕ ಮಾತನಾಡಿದ ಅವರು ಕಾಪಿರೈಟ್ ಬಗ್ಗೆ ಇಂಡಸ್ಟ್ರಿಯಲ್ಲಿ ನಾಲೆಡ್ಜೇ ಇಲ್ಲ. ನನ್ನ ಪ್ರಕಾರ, ಕಾಪಿರೈಟ್ ಉಲ್ಲಂಘನೆ ಅಲ್ಲ. ಈ ಸಿನಿಮಾಗೂ ಮುನ್ನ ಆ ಹಾಡುಗಳನ್ನು ಬಳಸಲು ಅನುಮತಿಗಾಗಿ ಎಂಆರ್‌ಟಿ ಮ್ಯೂಸಿಕ್ ಸಂಸ್ಥೆ ಅವರ ಬಳಿ ಮಾತನಾಡಿದಾಗ, ಹೆಚ್ಚಿನ ಮೊತ್ತ ಕೇಳಿದ್ದರು. ಅಷ್ಟು ದೊಡ್ಡ ಅಮೌಂಟ್ ಕೊಡೋಕೆ ನಮಗೆ ಸರಿ ಎನಿಸಲಿಲ್ಲ. ಆಮೇಲೆ ಅವರು ಹೇಳ್ತೀವಿ ಅಂತ ಆ ಮಾತುಕತೆ ಅಲ್ಲೇ ನಿಂತು ಹೋಯಿತು. ಈ ಸಿನಿಮಾದ ರಿಲೀಸ್ ನಂತರ ಅವರು ಕೇಸ್ ಹಾಕಿದ್ದಾರೆ.

ಕನ್ನಡದ ಹಾಡನ್ನು ಕನ್ನಡ ಚಿತ್ರದಲ್ಲಿ ಬಳಕೆ ಮಾಡುವಂತೆಯೇ ಇಲ್ವಾ ಎಂದು ನಟ ಪ್ರಶ್ನಿಸಿದ್ದಾರೆ. ಕೊಟ್ಟಿರುವ ಕಂಪ್ಲೆಂಟ್‌ಗೆ ನಾನು ಕೂಡ ಕೋರ್ಟ್‌ನಲ್ಲಿ ಫೈಟ್ ಮಾಡ್ತೀನಿ ಎಂದಿದ್ದಾರೆ. ಸಾಂಧರ್ಬಿಕವಾಗಿ ಹಾಡು ಬಳಕೆಯಾಗಿದೆ ಅಷ್ಟೆ. ಕಾಪಿರೈಟ್ ಆಕ್ಟ್ ಏನು ಹೇಳುತ್ತೆ ಎಂಬುದನ್ನು ಕೋರ್ಟ್‌ನಲ್ಲಿ ನೋಡೋಣ. ನ್ಯಾಯಾಲಯ ತೀರ್ಮಾನ ಮಾಡಲಿ. ಈ ಬಗ್ಗೆ ನಮಗೂ ಯಾವುದೂ ಬಳಸಬೇಕು ಯಾವುದು ಬಳಸಬಾರದು ಅಂತ ಅರ್ಥವಾಗಲಿ ಎಂದಿದ್ದಾರೆ.

- Advertisement -

Latest News

error: Content is protected !!