Saturday, June 6, 2026
Homeತಾಜಾ ಸುದ್ದಿಚುನಾವಣೆಯಲ್ಲಿ ಗೆದ್ದವರು, ಸೋತವರು ಎಲ್ಲರೂ ನಾಯಕಿಯರೇ - ಮಾಜಿ ಸಚಿವೆ ಉಮಾಶ್ರೀ

ಚುನಾವಣೆಯಲ್ಲಿ ಗೆದ್ದವರು, ಸೋತವರು ಎಲ್ಲರೂ ನಾಯಕಿಯರೇ – ಮಾಜಿ ಸಚಿವೆ ಉಮಾಶ್ರೀ

- Advertisement -
- Advertisement -

ಸುಳ್ಯ: ಪಕ್ಷದಲ್ಲಿ ಅವಕಾಶ ಪಡೆದ ಮತ್ತು ಅವಕಾಶ ವಂಚಿತ ಎಲ್ಲ ಮಹಿಳೆಯರೂ ಕೂಡಾ ನಾಯಕಿಯರೇ. ನಾ. ನಾಯಕಿ ಸಮಾವೇಶದ ಉದ್ದೇಶ ಇದುವೇ. ಇದು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ರ ಕಲ್ಪನೆ ಎಂದು ಮಾಜಿ ಸಚಿವೆ, ಕಾಂಗ್ರೆಸ್ ನಾ. ನಾಯಕಿ ಸಮಾವೇಶದ ರಾಜ್ಯ ಸಂಚಾಲಕಿ ಶ್ರೀಮತಿ ಉಮಾಶ್ರೀ ಹೇಳಿದರು.


ಕಾಂಗ್ರೆಸ್ ನಾ… ನಾಯಕಿ ಸಮಾವೇಶದ ಕುರಿತು ಮೇ.11 ರಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಅವರು ಮಾಹಿತಿ ನೀಡಿದರು.


ಗ್ರಾ.ಪಂ., ತಾ.ಪಂ., ಜಿ.ಪಂ.ನ ಹಾಲಿ ಸದಸ್ಯರು, ಮಾಜಿ ಸದಸ್ಯರು, ಚುನಾವಣೆಯಲ್ಲಿ ಸ್ಪರ್ಧಿಸಿ ದವರು, ಪಕ್ಷದಲ್ಲಿ ಅವಕಾಶ ವಂಚಿತರಾದವರು ಹೀಗೆ ಎಲ್ಲರನ್ನು ಪಕ್ಷದಲ್ಲಿ ಮುಖ್ಯವಾಹಿನಿಗೆ ತರಬೇಕು. ಎಲ್ಲ ಮಹಿಳೆಯರೂ ನಾಯಕಿಯ ರಾಗಬೇಕು ಎಂಬ ನಿಟ್ಟಿನಲ್ಲಿ ನಾ. ನಾಯಕಿ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಸಮಾವೇಶದ ಎಲ್ಲ ಕೆಲಸವನ್ನು ಮಹಿಳೆಯರೇ ನಿರ್ವಹಿಸಲಿದ್ದಾರೆ. ಜತೆಗೆ ಪಕ್ಷ ಸಂಘಟನೆಯನ್ನು ಎಲ್ಲರೂ ಸೇರಿ ಮಾಡೋಣ ಎಂದು ಅವರು ಹೇಳಿದರು.

- Advertisement -

Latest News

error: Content is protected !!