Saturday, June 6, 2026
Homeಕರಾವಳಿಕಡಬ: ಪಾನಮತ್ತರಾಗಿ ಯಾತ್ರಾರ್ಥಿಗಳೊಂದಿಗೆ ವಾಗ್ವಾದಕ್ಕಿಳಿದ ಯುವಕರು: ಸ್ಥಳೀಯ ಹುಡುಗರ ನಶೆ ಇಳಿಸಿದ ಪ್ರವಾಸಿಗರು

ಕಡಬ: ಪಾನಮತ್ತರಾಗಿ ಯಾತ್ರಾರ್ಥಿಗಳೊಂದಿಗೆ ವಾಗ್ವಾದಕ್ಕಿಳಿದ ಯುವಕರು: ಸ್ಥಳೀಯ ಹುಡುಗರ ನಶೆ ಇಳಿಸಿದ ಪ್ರವಾಸಿಗರು

- Advertisement -
- Advertisement -

ಕಡಬ:  ದಾರಿ ಕೊಡದ ವಿಚಾರದಲ್ಲಿ   ಯಾತ್ರಾರ್ಥಿಗಳು ಮತ್ತು ಯುವಕರ ನಡುವೆ ಮಾತಿನ ಚಕಮಕಿ ನಡೆದು ಹೊಡೆದಾಟವಾಗಿರುವ ಘಟನೆ ಕಡಬದ ಮರ್ದಾಳ ಬಳಿಯ ಕಲ್ಲಾಜೆ ಎಂಬಲ್ಲಿ ನಡೆದಿದೆ.

ಕಡಬದ ಕಲ್ಲಾಜೆ ಎಂಬಲ್ಲಿ ಯಾತ್ರಾರ್ಥಿಗಳಿದ್ದ ಬಸ್  ಕಾರೊಂದರ ಎದುರಿನಿಂಗ ವೇಗವಾಗಿ ಬಂದಿದೆ.   ಈ ವೇಳೆ ಸೈಡ್  ಕೊಡುವ ವಿಚಾರಕ್ಕೆ  ಕಾರೊಂದರಲ್ಲಿದ್ದ  ಕೊಂಬಾರು ಭಾಗದ  ಯುವಕರು ವಾಗ್ವಾದ ಮಾಡಿದ್ದಾರೆ ಎನ್ನಲಾಗಿದೆ.

ಕಾರಿನಲ್ಲಿದ್ದ ಯುವಕರ ತಂಡ ಪಾನಮತ್ತರಾಗಿದ್ದರು ಎನ್ನಲಾಗಿದೆ. ವಾಗ್ವಾದ ಜೋರಾಗುತ್ತಿದ್ದಂತೆ ಯಾತ್ರಾರ್ಥಿಗಳು ಯುವಕರಿಗೆ ಥಳಿದ್ದು, ಎಣ್ಣೆ ಮಶೆ ತನ್ನಿಂದ ತಾನೇ ಇಳಿದಿದೆ.  ಬಳಿಕ ಕಡಬ ಪೊಲೀಸರ ಮದ್ಯ ಪ್ರವೇಶದಿಂದ ಈ ಪ್ರಕರಣ ಮಾತುಕತೆಯಲ್ಲಿ ಸುಖಾಂತ್ಯಗೊಂಡಿದೆ  ಎನ್ನಲಾಗಿದೆ.

- Advertisement -

Latest News

error: Content is protected !!