Thursday, June 25, 2026
Homeತಾಜಾ ಸುದ್ದಿರಾಹುಲ್ ಗಾಂಧಿಗೆ ಬಚ್ಚಾ ಎನ್ನುವ ಯೋಗ್ಯತೆ ಯಡಿಯೂರಪ್ಪನವರಿಗೆ ಇದ್ಯಾ?: ಚಿತ್ರದುರ್ಗದಲ್ಲಿ ಮಾಜಿ ಸಚಿವ ರಮಾನಾಥ ರೈ...

ರಾಹುಲ್ ಗಾಂಧಿಗೆ ಬಚ್ಚಾ ಎನ್ನುವ ಯೋಗ್ಯತೆ ಯಡಿಯೂರಪ್ಪನವರಿಗೆ ಇದ್ಯಾ?: ಚಿತ್ರದುರ್ಗದಲ್ಲಿ ಮಾಜಿ ಸಚಿವ ರಮಾನಾಥ ರೈ ಪ್ರಶ್ನೆ

- Advertisement -
- Advertisement -

ಚಿತ್ರದುರ್ಗ: ರಾಹುಲ್ ಗಾಂಧಿ ಬಚ್ಚಾ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಾಜಿ ಸಚಿವ ಬಿ. ರಮಾನಾಥ ರೈ ತಿರುಗೇಟು ನೀಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗಿರಿಯಮ್ಮನಹಳ್ಳಿಯಲ್ಲಿ ಮಾತನಾಡಿದ ರಮಾನಾಥ ರೈ, ಯಡಿಯೂರಪ್ಪ ಜೈಲಿಗೆ ಹೋಗಿದ್ದವರು, ಯಾರಿಗೆ ಬುದ್ಧಿ ಹೇಳ್ತಾರೆ? ರಾಹುಲ್ ಗೆ ಬಚ್ಚಾ ಎಂದು ಹೇಳುವ ಯೋಗ್ಯತೆ ಇದೆಯಾ ಎಂದು ಪ್ರಶ್ನಿಸಿದ್ದಾರೆ.

ನಳೀನ್ ಕುಮಾರ್ ಕಟೀಲ್ ಗೆ ಬುದ್ಧಿ ಇಲ್ಲ, ವಯಸ್ಸಾದ ಬಳಿಕ ಬಿಎಸ್ ವೈ ಮಕ್ಕಳಂತೆ ಮಾತಾಡ್ತಿದ್ದಾರೆ, ಕಟೀಲ್ ಯುವಕನಾಗಿದ್ದು ಮಕ್ಕಳಂತೆ ಮಾತಾಡ್ತಾರೆ ಎಂದು ರಮಾನಾಥ ರೈ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಆಡಳಿತದಲ್ಲಿ 24 ಹಿಂದೂಗಳ ಹತ್ಯೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿರುವ ಮಾಜಿ ಸಚಿವ ರೈ, ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜನ ಸಮಾನ ಪ್ರಮಾಣದಲ್ಲಿ ಸಾವು ಆಗಿದ್ದು, ಯಾವ ಪ್ರಕರಣದಲ್ಲೂ ಓರ್ವ ಕಾಂಗ್ರೆಸ್ಸಿಗರ ಹೆಸರಿಲ್ಲ, ಒಬ್ಬರ ಹೆಸರಿದ್ದರೂ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಬಿಜೆಪಿ ಮತ್ತು ಎಸ್ ಡಿ‌ಪಿಐ ನವರು ಮಾತ್ರ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಅವರು ಇವರನ್ನು ಇವರು ಅವರನ್ನು ಸಾಯಿಸಿದ್ದಾರೆ, ಬಿಜೆಪಿ ಮತ್ತು ಎಸ್ ಡಿಪಿಐ ಎರಡೂ ಕೊಲೆಗಡುಕ ಪಕ್ಷಗಳು ಎಂದು ರಮಾನಾಥ ರೈ ಆರೋಪಿಸಿದ್ದಾರೆ.

- Advertisement -

Latest News

error: Content is protected !!