- Advertisement -
- Advertisement -
ಉಡುಪಿ: ಕಾಂಗ್ರೆಸ್ ಪಕ್ಷದ ಪರವಾಗಿದ್ದರೆ ಏನೂ ಕೂಡಾ ಮಾಡಬಹುದು ಎನ್ನುವ ಧೈರ್ಯದಿಂದ ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೃತ್ಯವಾಗಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿರುವ ಪ್ರಮೋದ್ ಮಧ್ವರಾಜ್, ಇನ್ನಾದರೂ ರಾಜ್ಯದ ಸರ್ಕಾರ ಎಚ್ಚರಿಕೆಯನ್ನು ವಹಿಸಬೇಕು ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ರಾಜ್ಯದ ಅಭಿವೃದ್ಧಿ ಮಾಡುವುದರಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದರ ಜೊತೆಯಲ್ಲೇ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದರಲ್ಲೂ ಸೋತಿದೆ ಎಂದು ಹೇಳಿರುವ ಪ್ರಮೋದ್ ಮಧ್ವರಾಜ್, ಹೆಣ್ಣು ಮಕ್ಕಳ ಕಗ್ಗೊಲೆಯಾಗುತ್ತಿದ್ದು,
ಚಾಕು ಚೂರಿಗಳ ಮೇಲಾಟದಿಂದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿದ್ದಾರೆ.
ರಾಷ್ಟ್ರ ವಿರೋಧಿ ಶಕ್ತಿಗಳಿಗೆ ಕಾಂಗ್ರೆಸ್ ಸರ್ಕಾರ ಧೈರ್ಯ ನೀಡುತ್ತಿದೆ ಎಂದು ಆರೋಪಿಸಿರುವ ಪ್ರಮೋದ್ ಮಧ್ವರಾಜ್, ಬೋಳಿಯಾರಿನಲ್ಲಿ ನಡೆದ ಘಟನೆ ನಿದರ್ಶನ ಎಂದು ಹೇಳಿದ್ದಾರೆ.
- Advertisement -