Saturday, October 17, 2026
Homeಕರಾವಳಿಉಡುಪಿಆರ್ ಎಸ್ ಎಸ್ ಅನ್ನು 5 ತಿಂಗಳಿನಲ್ಲಿ ನಾನು ಪ್ರತ್ಯಕ್ಷವಾಗಿ ಕಂಡಿದ್ದೇನೆ: ಉಡುಪಿಯಲ್ಲಿ ಮಾಜಿ ಸಚಿವ...

ಆರ್ ಎಸ್ ಎಸ್ ಅನ್ನು 5 ತಿಂಗಳಿನಲ್ಲಿ ನಾನು ಪ್ರತ್ಯಕ್ಷವಾಗಿ ಕಂಡಿದ್ದೇನೆ: ಉಡುಪಿಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿಕೆ

- Advertisement -
- Advertisement -

ಉಡುಪಿ: ಆರ್ ಎಸ್ಎಸ್ ದೇಶಭಕ್ತಿ, ದೇಶಪ್ರೇಮ ಮತ್ತು ದೇಶ ನಿಷ್ಠೆಯ ಸಂಘಟನೆಯಾಗಿದ್ದು ಕಳೆದ ಐದು ತಿಂಗಳಲ್ಲಿ ನಾನು ಇದನ್ನು ಪ್ರತ್ಯಕ್ಷವಾಗಿ ಕಂಡಿದ್ದೇನೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಉಡುಪಿಯಲ್ಲಿ ಇಂದು ಮಾತನಾಡಿದ ಪ್ರಮೋದ್ ಮಧ್ವರಾಜ್, ಸಂಘದ ಹೊರಗೆ ಇದ್ದು ಟೀಕೆ ಮಾಡುವುದು ಸುಲಭವಾಗಿದ್ದು, ದೇಶ ಕಟ್ಟುವ ಕೆಲಸವನ್ನು ಆರ್ ಎಸ್ಎಸ್ ಮಾಡುತ್ತಿದೆ ಎಂದು ಹೇಳಿದ್ದಾರೆ.

ನಾನು ಕೂಡ ಹಿಂದೆ ಆರ್ ಎಸ್ಎಸ್ ಬಗ್ಗೆ ವಿರೋಧ ಮಾತನಾಡುತ್ತಿದ್ದೆ ಎಂದು ಹೇಳಿರುವ ಪ್ರಮೋದ್ ಮಧ್ವರಾಜ್, ಆರ್ ಎಸ್ಎಸ್ ಬಗ್ಗೆ ಹೊಟ್ಟೆಕಿಚ್ಚಿನಿಂದ ಕೆಲವರು ಮಾತನಾಡುತ್ತಾರೆ, ಅಜ್ಞಾನದಿಂದ ಮಾತನಾಡುವವರು ಆರ್ ಎಸ್ ಎಸ್ ನ ಜ್ಞಾನ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಉಡುಪಿಯಲ್ಲಿ ಇಂದು ನಡೆದಿದ್ದ ಆರ್ ಎಸ್ಎಸ್ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪದಲ್ಲಿ ಪ್ರಮೋದ್ ಮಧ್ವರಾಜ್ ಭಾಗಿಯಾಗಿದ್ದರು. ಬಿಜೆಪಿ ಸೇರಿದ ನಂತರ ಆರ್ ಎಸ್ಎಸ್ ಚಟುವಟಿಕೆಗಳಲ್ಲಿ ಪ್ರಮೋದ್ ಮಧ್ವರಾಜ್ ಪಾಲ್ಗೊಳ್ಳುತ್ತಿದ್ದಾರೆ.

- Advertisement -

Latest News

error: Content is protected !!