Friday, May 3, 2024
Homeತಾಜಾ ಸುದ್ದಿ1000 ಕಿ.ಮೀ. ಪೂರೈಸಿದ ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ

1000 ಕಿ.ಮೀ. ಪೂರೈಸಿದ ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ

spot_img
- Advertisement -
- Advertisement -

ಬಳ್ಳಾರಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ಪಾದಯಾತ್ರೆಯು 7 ಸೆಪ್ಟೆಂಬರ್ ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾಗಿ ಇಂದು 1000 ಕಿಲೋ ಮೀಟರ್ ಪೂರೈಸಿದೆ.

ಮಹಾತ್ಮ ಗಾಂಧಿಯವರ ದಂಡಿ ಮೆರವಣಿಗೆಯು ಗುಜರಾತ್ ರಾಜ್ಯದ ಸಬರಮತಿ ಆಶ್ರಮದ ದಂಡಿ (ನವಸರಿ) ನಡುವೆ ಕಾಲ್ನಡಿಗೆಯಲ್ಲಿ (24 ದಿನಗಳಲ್ಲಿ 389 ಕಿಲೋಮೀಟರ್) ಉದ್ದದ ಮೆರವಣಿಗೆಯಾಗಿತ್ತು.

ಭಾರತ್ ಜೋಡೋ ಯಾತ್ರೆಯು ಆಂಧ್ರಪ್ರದೇಶವನ್ನು ಪ್ರವೇಶಿಸುವ ಮೊದಲು ಬಳ್ಳಾರಿ ಜಿಲ್ಲೆಯ ಹೊರವಲಯಕ್ಕೆ ಬಂದಾಗ ಈ ಮೈಲಿಗಲ್ಲು 1000 ಕಿಲೋಮೀಟರ್ ಪೂರೈಸಿದೆ. ಪ್ರತಿ ದಿನ 20 ನಿಮಿಷಗಳ ವ್ಯಾಯಾಮ, ಬೆಳಿಗ್ಗೆ ಲಘು ಉಪಹಾರ ಮತ್ತು ದಿನವಿಡೀ 25 ಕಿಲೋಮೀಟರ್ ಮೂರು ದಕ್ಷಿಣ ರಾಜ್ಯಗಳಾದ ತಮಿಳುನಾಡು, ಕೇರಳ ಮತ್ತು ಕರ್ನಾಟಕದಾದ್ಯಂತ ರಾಹುಲ್ ಗಾಂಧಿ ಪ್ರಯಾಣಿಸಿದ್ದಾರೆ.

ತಮಿಳುನಾಡಿನಲ್ಲಿ ಲಕ್ಷಕ್ಕೂ ಅಧಿಕ ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಕೇರಳದಲ್ಲಿ ಇದು 1.25 ಲಕ್ಷ ಜನ ರಾಹುಲ್ ಜೊತೆ ಹೆಜ್ಜೆಹಾಕಿದ್ದಾರೆ. ಕರ್ನಾಟಕದಲ್ಲಿ 1.50 ಲಕ್ಷಕ್ಕೂ ಹೆಚ್ಚು ಜನರು ಐಕ್ಯತಾ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಹಲವು ಹಂತದ ಒಟ್ಟು 3750 ಕಿಲೋಮೀಟರ್‌ಗಳ ಭಾರತ್ ಜೋಡೋ ಪಾದಯಾತ್ರೆಯು ಮೊದಲ 1000 ಕಿಲೋಮೀಟರ್ ಗಳನ್ನು ಇಂದಿಗೆ ಬಳ್ಳಾರಿಯಲ್ಲಿ ಪೂರೈಸಿದೆ.

- Advertisement -
spot_img

Latest News

error: Content is protected !!