Thursday, June 25, 2026
Homeತಾಜಾ ಸುದ್ದಿತಪ್ಪು ಅಭ್ಯರ್ಥಿ ಆಯ್ಕೆ, ತಪ್ಪು ಸ್ಟ್ರಾಟಜಿ ರಾಜ್ಯದಲ್ಲಿ ಕಾಂಗ್ರೆಸ್ ಹಿನ್ನೆಡೆಗೆ ಕಾರಣ; ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿಕೆ

ತಪ್ಪು ಅಭ್ಯರ್ಥಿ ಆಯ್ಕೆ, ತಪ್ಪು ಸ್ಟ್ರಾಟಜಿ ರಾಜ್ಯದಲ್ಲಿ ಕಾಂಗ್ರೆಸ್ ಹಿನ್ನೆಡೆಗೆ ಕಾರಣ; ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿಕೆ

- Advertisement -
- Advertisement -

ನವದೆಹಲಿ: ತಪ್ಪು ಅಭ್ಯರ್ಥಿ ಆಯ್ಕೆ ಮತ್ತು ತಪ್ಪು ಸ್ಟ್ರಾಟಜಿ ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಯಿತು ಎಂದು ಮಾಜಿ ಮುಖ್ಯಮಂತ್ರಿ ಎಂ.‌ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ನವದೆಹಲಿಯಲ್ಲಿ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ‌ಖರ್ಗೆ ಅವರನ್ನು ಭೇಟಿ ಮಾಡಿದ ಬಳಿಕ ಪ್ರತಿಕ್ರಿಯಿಸಿದ ಮೊಯ್ಲಿ, ನಾವು 20 ಕ್ಕಿಂತ ಜಾಸ್ತಿ ಸ್ಥಾನ ಗೆಲ್ಲಬಹುದಿತ್ತು, ಆದರೆ ವಿಧಾನಸಭಾ ಚುನಾವಣಾ ಗೆಲುವಿನ ಮೇಲೆಯೇ ಸವಾರಿ ಮಾಡಿದ್ದು ಕಾಂಗ್ರೆಸ್ ಹಿನ್ನೆಡೆಗೆ ಕಾರಣವಾಯಿತು ಎಂದು ಹೇಳಿದ್ದಾರೆ.

ಇದೇ ವೇಳೆ, ಲೋಕಸಭಾ ಚುನಾವಣೆಯಲ್ಲಿ ಸೋಲು ಆಯಿತು ಅಂತಾ ನೇರವಾಗಿ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತ ಮಾಡುವುದು ಸೂಕ್ತವಲ್ಲ ಎಂದೂ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಅಲ್ಲದೇ, ಗ್ಯಾರಂಟಿ ಯೋಜನೆಗಳಿಂದಲೇ ನಾವು ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇವೆ. ಇದನ್ನು ಹಾಗೆ ಸುಮ್ಮನೆ ಬಿಟ್ಟು ಬಿಡಲು ಆಗುವುದಿಲ್ಲ. ವಿಸ್ತ್ರತ ಚರ್ಚೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮೊಯ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!