Thursday, June 4, 2026
Homeಕರಾವಳಿಶಿರಾಡಿ ಘಾಟ್ ನಲ್ಲಿ ಎಚ್ಚರಿಕೆಯಿಂದ ಸಂಚರಿಸುವಂತೆ ಸಕಲೇಶಪುರ ತಾಲೂಕು ಆಡಳಿತದಿಂದ ಸೂಚನೆ

ಶಿರಾಡಿ ಘಾಟ್ ನಲ್ಲಿ ಎಚ್ಚರಿಕೆಯಿಂದ ಸಂಚರಿಸುವಂತೆ ಸಕಲೇಶಪುರ ತಾಲೂಕು ಆಡಳಿತದಿಂದ ಸೂಚನೆ

- Advertisement -
- Advertisement -

ಸಕಲೇಶಪುರ: ಶಿರಾಡಿ ಘಾಟ್ ರಸ್ತೆಯಲ್ಲಿ ಎಚ್ಚರಿಕೆಯಿಂದ ಸಂಚರಿಸುವಂತೆ ವಾಹನ ಸವಾರರಿಗೆ ಸಕಲೇಶಪುರ ತಾಲ್ಲೂಕು ಆಡಳಿತ ಸೂಚನೆ ನೀಡಿದೆ.

ಹಾಸನ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಮಳೆ ಮುನ್ನೆಚ್ಚರಿಕೆಯ ಸೂಚನೆ ನೀಡಿದೆ.

ಸಕಲೇಶಪುರ ತಾಲೂಕು ಹಾಗೂ ಶಿರಾಡಿ ಘಾಟ್‌ನಲ್ಲಿ ಇಂದು ಬೆಳಗ್ಗೆಯಿಂದಲೂ ಜೋರು ಮಳೆಯಾಗಿದ್ದು, ಕೆಲವು ಕಡೆ ರಸ್ತೆಗೆ ಮರಗಳು ಉರುಳಿ ಬಿದ್ದು ರಸ್ತೆ ಸಂಚಾರಕ್ಕೆ ಕೂಡಾ ಅಡ್ಡಿಯಾಗಿದೆ.

ಅಲ್ಲದೇ ವಾರಾಂತ್ಯವಾಗಿರುವ ಕಾರಣ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ವಾಹನ ಸಂಚಾರ ಕೂಡಾ ಹೆಚ್ಚಾಗಿರುವುದರಿಂದ ಎಚ್ಚರಿಕೆಯಿಂದ ತೆರಳುವಂತೆ ತಿಳಿಸಲಾಗಿದೆ

- Advertisement -

Latest News

error: Content is protected !!