Saturday, June 6, 2026
Homeತಾಜಾ ಸುದ್ದಿಗಾಂಧೀಜಿ ಪತ್ನಿ ಕೂಡ ತಲೆಮೇಲೆ ಸೆರಗು ಹಾಕುತ್ತಿದ್ರು: ಹಿಜಾಬ್ ಪರ ಹೆಚ್‌ಡಿಕೆ ಬ್ಯಾಟಿಂಗ್!

ಗಾಂಧೀಜಿ ಪತ್ನಿ ಕೂಡ ತಲೆಮೇಲೆ ಸೆರಗು ಹಾಕುತ್ತಿದ್ರು: ಹಿಜಾಬ್ ಪರ ಹೆಚ್‌ಡಿಕೆ ಬ್ಯಾಟಿಂಗ್!

- Advertisement -
- Advertisement -

ಹಿಜಾಬ್ ವಿವಾದಕ್ಕೆ ಕೋರ್ಟ್ ತೆರೆ ಎಳೆದಿದ್ರೂ ಕೂಡ ರಾಜ್ಯದಲ್ಲಿ ಹಿಜಾಬ್ ಹಗ್ಗಜಗ್ಗಾಟ ಮಾತ್ರ ನಿಂತಿಲ್ಲ. ಇದೀಗ ವಿವಾದದ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿಧಾನಸೌಧದಲ್ಲಿ ಮಾತಾಡಿದ್ದು, ಮಹಾತ್ಮ ಗಾಂಧೀಜಿ ಅವರ ಧರ್ಮಪತ್ನಿ ಕಸ್ತೂರ್ಬಾ ಅವರು ಕೂಡ ತಲೆಗೆ ಸೆರಗು ಹಾಕುತ್ತಿದ್ದರು ಎನ್ನುವ ಮೂಲಕ ಹಿಜಾಬ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಹೆಣ್ಣು ಮಕ್ಕಳು ಸಮವಸ್ತ್ರದ ಜೊತೆಗೆ ಅನೇಕ ಸಂದರ್ಭಗಳಲ್ಲಿ ತಮಗೆ ಬೇಕಾದಂತೆ ದುಪ್ಪಟ್ಟ ಧರಿಸುತ್ತಾರೆ. ಅದನ್ನು ವಿವಾದ ಮಾಡುವುದನ್ನು ಬಿಟ್ಟು ಸರ್ಕಾರ ಸಮವಸ್ತ್ರಕ್ಕೆ ಪೂರಕವಾಗಿ ದುಪ್ಪಟ್ಟ ಹಾಕಿ ಬರುವುದಕ್ಕೆ ಅವಕಾಶ ಮಾಡಿಕೊಡಲಿ. ತಲೆ ಮೇಲೆ ಸೆರಗಿನ ರೀತಿ ವಸ್ತ್ರವನ್ನು ಹಾಕಿಕೊಂಡು ಬರುವುದಕ್ಕೆ ಅವಕಾಶ ಮಾಡಿಕೊಟ್ಟರೆ ಮುಗಿದೇ ಹೋಯಿತು. ಅದನ್ನು ವಿವಾದ ಮಾಡುವುದು ಯಾಕೆ ಎಂದು ಕಿಡಿಕಾರಿದ್ದಾರೆ.

- Advertisement -

Latest News

error: Content is protected !!