Sunday, August 30, 2026
Homeತಾಜಾ ಸುದ್ದಿರಸ್ತೆ ಬದಿಯ ನಂದಿನಿ ಪಾರ್ಲರ್ ಗೆ ಹೋಗಿ ಬಾದಾಮಿ ಹಾಲು ಸೇವಿಸಿದ ಶಿಕ್ಷಣ ಸಚಿವ ನಾಗೇಶ್

ರಸ್ತೆ ಬದಿಯ ನಂದಿನಿ ಪಾರ್ಲರ್ ಗೆ ಹೋಗಿ ಬಾದಾಮಿ ಹಾಲು ಸೇವಿಸಿದ ಶಿಕ್ಷಣ ಸಚಿವ ನಾಗೇಶ್

- Advertisement -
- Advertisement -

ಕೊಪ್ಪಳ: ಕೊಪ್ಪಳ ಜಿಲ್ಲಾ ಪ್ರವಾಸದಲ್ಲಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮತ್ತೊಮ್ಮೆ ಸರಳತೆ ತೋರ್ಪಡಿಸಿದ್ದಾರೆ.

ರಸ್ತೆ ಬದಿಯಲ್ಲಿರುವ ನಂದಿನಿ ಮಿಲ್ಕ್ ಪಾರ್ಲರ್ ಗೆ ಹೋಗಿ ಬಾದಾಮಿ ಹಾಲು ಸೇವಿಸಿದ್ದಾರೆ.

ಕೊಪ್ಪಳ ನಗರದ ಸಾಹಿತ್ಯ ಭವನದ ಮುಂಭಾಗದಲ್ಲಿರೋ ನಂದಿನಿ ಮಿಲ್ಕ್ ಪಾರ್ಲರ್ ಗೆ ಸಚಿವ ನಾಗೇಶ್ ಭೇಟಿ ನೀಡಿದ್ದರು.

ಶಿಕ್ಷಣ ಸಚಿವರಿಗೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಸಾಥ್ ನೀಡಿದ್ದರು.

ಈ ಹಿಂದೆಯೂ ಕೂಡಾ ಸಚಿವ ನಾಗೇಶ್ ರಸ್ತೆ ಬದಿಯ ಸಣ್ಣ ಹೋಟೆಲ್ ಗೆ ಭೇಟಿ ನೀಡಿ ಟೀ ಸೇವಿಸಿದ್ದು, ಚಲಿಸುತ್ತಿದ್ದ ರೈಲಿಗೆ ಓಡುತ್ತಾ ಹೋಗಿ ಹತ್ತಿಕೊಂಡಿದ್ದು ಗಮನ ಸೆಳೆದಿತ್ತು.

- Advertisement -

Latest News

error: Content is protected !!