Thursday, May 2, 2024
Homeತಾಜಾ ಸುದ್ದಿಮದುವೆ ಕಾರ್ಯಕ್ರಮದಲ್ಲಿ ಹುಚ್ಚಾಟ ಮೆರೆದ ಗ್ರಾಮ ಪಂಚಾಯತ್ ಸದಸ್ಯರು

ಮದುವೆ ಕಾರ್ಯಕ್ರಮದಲ್ಲಿ ಹುಚ್ಚಾಟ ಮೆರೆದ ಗ್ರಾಮ ಪಂಚಾಯತ್ ಸದಸ್ಯರು

spot_img
- Advertisement -
- Advertisement -

ರಾಯಚೂರು: ಮದುವೆ ಸಮಾರಂಭವೊಂದರಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಹುಚ್ಚಾಟ ಮೆರೆದಿರುವ ಘಟನೆ ರಾಯಚೂರು ತಾಲೂಕಿನಲ್ಲಿ ನಡೆದಿದೆ.

ಚಂದ್ರ ಬಂಡಾ ಗ್ರಾಮದಲ್ಲಿ ವಿವಾಹ ಕಾರ್ಯಕ್ರಮದಲ್ಲಿ ಯುವತಿಯರೊಂದಿಗೆ ಅಸಭ್ಯವಾಗಿ ಕುಣಿದು ದುರ್ವರ್ತನೆ ತೋರಿದ್ದಾರೆ.

ಬಾಯದೊಡ್ಡಿ, ಕುರುಬದೊಡ್ಡಿ, ಗೌಸ ನಗರ, ಕಡಗಂದೊಡ್ಡಿ ಮತ್ತು ವಡವಟ್ಟಿ ಗ್ರಾಮ ಪಂಚಾಯತ್ ಸದಸ್ಯರು ಪಂಚಾಯತ್ ಸದಸ್ಯರೊಬ್ಬರ ಸಂಬಂಧಿ ಮದುವೆಯಲ್ಲಿ‌ ಕುಣಿದು ಕುಪ್ಪಳಿಸಿದ್ದಾರೆ.

ಮಕ್ಕಳು, ಮಹಿಳೆಯರು, ವೃದ್ಧರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಯುವತಿಯರ ಜೊತೆ‌ ಕುಣಿದು ಅಸಭ್ಯ ವರ್ತನೆ ತೋರಿಸಿರುವ ಆರೋಪ ವ್ಯಕ್ತವಾಗಿದೆ.

ಹೈದರಾಬಾದ್‌ನಿಂದ ನೃತ್ಯ ಮಾಡಲು ಯುವತಿಯರನ್ನು ಕರೆಸಲಾಗಿತ್ತು ಎಂದು ಹೇಳಲಾಗಿದೆ.

ಮೇ 26 ರಂದು ನಡೆದ ಮದುವೆ ಸಮಾರಂಭದಲ್ಲಿ ಯುವತಿಯರ ಮೇಲೆ ಹಣ ಎಸೆದಿದ್ದು, ಜನಪ್ರತಿನಿಧಿಗಳ ಮಹಿಳೆಯರ ಜೊತೆಗಿನ ನೃತ್ಯದ ವೀಡಿಯೋ ವೈರಲ್ ಆಗಿದೆ.

ಸಾರ್ವಜನಿಕವಾಗಿ ಅಸಭ್ಯ ವರ್ತನೆ ತೋರಿದ್ದಕ್ಕೆ ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾಗಿದೆ.

- Advertisement -
spot_img

Latest News

error: Content is protected !!