Sunday, May 5, 2024
Homeಆರಾಧನಾಚಾರ್ಮಾಡಿ ಘಾಟಿ ಅರಣ್ಯ ಪ್ರದೇಶದಲ್ಲಿ ಡಿ.ವೀರೇಂದ್ರ ಹೆಗ್ಗಡೆಯವರಿಂದ ಹಣ್ಣಿನ ಬೀಜದ ಉಂಡೆಗಳ ಬಿತ್ತನೆ

ಚಾರ್ಮಾಡಿ ಘಾಟಿ ಅರಣ್ಯ ಪ್ರದೇಶದಲ್ಲಿ ಡಿ.ವೀರೇಂದ್ರ ಹೆಗ್ಗಡೆಯವರಿಂದ ಹಣ್ಣಿನ ಬೀಜದ ಉಂಡೆಗಳ ಬಿತ್ತನೆ

spot_img
- Advertisement -
- Advertisement -

ಬೆಳ್ತಂಗಡಿ: ಚಾರ್ಮಾಡಿ ಘಾಟಿ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಗೆ ಆಹಾರಕ್ಕೆ ಅಭಾವ ಉಂಟಾಗಿರುವ ಹಿನ್ನೆಲೆ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಚಾರ್ಮಾಡಿಯ ಕಣ್ಣಪ್ಪಾಡಿ ಮೀಸಲು ಅರಣ್ಯ ಪ್ರದೇಶದಲ್ಲಿ 10 ರಿಂದ 15 ಎಕ್ರೆ ಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ಕಾಡು ಪ್ರಾಣಿಗಳಿಗೆ ಆಹಾರಗಳು ಸಿಗುವಂತೆ ಮಾಡಲು ಇಂದು ಹಣ್ಣಿನ ಬೀಜದ ಉಂಡೆಗಳ ಬಿತ್ತನೆ ಕಾರ್ಯ ನಡೆಯಿತು.

ಇದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಚಾಲನೆ ನೀಡಿದರು.
ಈ ವೇಳೆ ವಿರೇಂದ್ರ ಹೆಗ್ಗಡೆಯವರ ಪುತ್ರಿ ಶ್ರದ್ಧಾ ಅಮಿತ್ ,ಸುರೇಂದ್ರ ಕುಮಾರ್ ಅವರ ಮಗಳು ಶ್ರುತಾ ಜಿತೇಶ್, SKDRP ಯ ಮುಖ್ಯ ನಿರ್ವಾಹಣಾಧಿಕಾರಿ ಡಾ.ಎಲ್.ಎಚ್.ಮಂಜುನಾಥ್ , ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರದೇಶಿಕ ನಿರ್ದೇಶಕರಾದ ವಿವೇಕ್ ಪಾಯಾಸ್, ಚಾರ್ಮಾಡಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಉಮೇಶ್ ಗೌಡ ಚಾರ್ಮಾಡಿ, ಚಾರ್ಮಾಡಿ ಪೆಟ್ರೋಲ್ ಬಂಕ್ ಮಾಲಕ ಅನಂತ ಭಟ್ , ಚಾರ್ಮಾಡಿ ಉಪವಲಯ ಅರಣ್ಯಾಧಿಕಾರಿ ರವೀಂದ್ರ ಅಂಕಲಾಗಿ, ಅರಣ್ಯ ರಕ್ಷಕ ಶರತ್ ಶೆಟ್ಟಿ, ವಿರೇಂದ್ರ ಹೆಗ್ಗಡೆಯವರ ಪಿಎ ವೀರು ಶೆಟ್ಟಿ, ಶೌರ್ಯ ವಿಪತ್ತು ಘಟಕದ ತಂಡದ ಸದಸ್ಯರು ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

- Advertisement -
spot_img

Latest News

error: Content is protected !!