Wednesday, June 24, 2026
Homeಕರಾವಳಿಮಂಗಳೂರು: ಲಿಂಬೆ ಹಣ್ಣು ಸಾಗಾಟದ ವಾಹನದಲ್ಲಿ 11 ಲಕ್ಷದ ಮೌಲ್ಯದ ಅಕ್ರಮ ಗಾಂಜಾ ವಶ, ಇಬ್ಬರ...

ಮಂಗಳೂರು: ಲಿಂಬೆ ಹಣ್ಣು ಸಾಗಾಟದ ವಾಹನದಲ್ಲಿ 11 ಲಕ್ಷದ ಮೌಲ್ಯದ ಅಕ್ರಮ ಗಾಂಜಾ ವಶ, ಇಬ್ಬರ ಬಂಧನ

- Advertisement -
- Advertisement -

ಮಂಗಳೂರು: ಲಿಂಬೆ ಹಣ್ಣುಗಳ ಮಧ್ಯೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

ಲತೀಫ್‌ ಹಾಗೂ ಶಿಹಾಬುದ್ದೀನ್‌

ಬಂಧಿತರನ್ನು ಲತೀಫ್‌ ಹಾಗೂ ಶಿಹಾಬುದ್ದೀನ್‌ ಎಂದು ಗುರುತಿಸಲಾಗಿದೆ. ನಗರದ ಕೊಟ್ಟಾರ ಚೌಕಿ ಬಳಿ ನಿನ್ನೆ ರಾತ್ರಿ ವೇಳೆ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಉಡುಪಿ ಕಡೆಯಿಂದ ಬಂದ ಕೇರಳ ನೋಂದಣಿಯ ಮಹೀಂದ್ರಾ ಬೊಲೆರೋ ವಾಹನದಲ್ಲಿ ಲಿಂಬೆ ಹಣ್ಣು ಮಧ್ಯ ತಲಾ 2 ಕೆ.ಜಿ ತೂಕದ 20 ಗಾಂಜಾ ಪ್ಯಾಕೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಾಹನ ಸಹಿತ 11 ಲಕ್ಷದ 17 ಸಾವಿರದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಡಿಸಿಪಿ ಹರಿರಾಂ ಶಂಕರ್‌ ತಿಳಿಸಿದ್ದಾರೆ.

- Advertisement -

Latest News

error: Content is protected !!