Thursday, June 25, 2026
Homeಕರಾವಳಿ'ದೇಯಿ ಬೈದೆತಿ' ತುಳು ಚಿತ್ರ ನಿರ್ದೇಶಕನ ಪುತ್ರ ಅಪಘಾತದಲ್ಲಿ ಸಾವು

‘ದೇಯಿ ಬೈದೆತಿ’ ತುಳು ಚಿತ್ರ ನಿರ್ದೇಶಕನ ಪುತ್ರ ಅಪಘಾತದಲ್ಲಿ ಸಾವು

- Advertisement -
- Advertisement -

ಬೆಂಗಳೂರು: ಖ್ಯಾತ ಖಳನಟ, ನಿರ್ದೇಶಕ, ಸ್ಕ್ರಿಪ್ಟ್ ರೈಟರ್ ಸೂರ್ಯೋದಯ ಪೆರಂಪಲ್ಲಿ ಅವರ ಮಗ 20 ವರ್ಷದ ಮಯೂರ್ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಬ್ಯಾಡರಹಳ್ಳಿಯ ನ್ಯೂ ಲಿಂಕ್ ರಸ್ತೆಯಲ್ಲಿ ಕೆಟಿಎಂ ಬೈಕ್ ನಲ್ಲಿ ತೆರಳುತ್ತಿದ್ದ ಮಯೂರ್ ಟ್ಯಾಂಕರ್ ಗಾಡಿಗೆ ಡಿಕ್ಕಿ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಯೂರ್ ಮೃತಪಟ್ಟಿದ್ದಾರೆ. ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಳುನಾಡಿನಲ್ಲಿ ಪರಾಕ್ರಮ ತೋರಿದ ರಣರಂಗದಲ್ಲಿಯೇ ಪ್ರಾಣಾರ್ಪಣೆ ಮಾಡಿದ ವೀರಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿಯ ಜೀವನಗಾಥೆಯ ‘ದೇಯಿ ಬೈದೆತಿ’ ತುಳು ಸಿನೆಮಾವನ್ನು ಸೂರ್ಯೋದಯ ಪೆರಂಪಲ್ಲಿಯವರು ನಿರ್ಮಿಸಿ ನಿರ್ದೇಶಿಸಿದ್ದಾರೆ.

- Advertisement -

Latest News

error: Content is protected !!