ದುಬೈ: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಬಿಸಿ ಕನ್ನಡಿಗರಿಗೂ ತಟ್ಟಿದೆ. ವಿಮಾನ ಹಾರಾಟ ಸ್ಥಗಿತಗೊಂಡಿರುವ ಕಾರಣ ವಿಧಾನ ಪರಿಷತ್ ಸದಸ್ಯ ಸೇರಿದಂತೆ ಕನ್ನಡಿಗರು ದುಬೈ ಏರ್ ಪೋರ್ಟ್ ನಲ್ಲಿ ಉಳಿದಿದ್ದಾರೆ.
ಯುದ್ಧದ ಹಿನ್ನೆಲೆಯಲ್ಲಿ ದುಬೈ ಏರ್ ಪೋರ್ಟ್ ನಲ್ಲಿ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದ್ದು, ವಿಮಾನದಲ್ಲಿ ಕುಳಿತಿದ್ದ ಪ್ರಯಾಣಿಕರನ್ನು ವಾಪಸ್ ಕರೆಸಲಾಗಿದೆ.
ನೈಋತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಕುಟುಂಬ ಸಮೇತ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ಗೆ ತೆರಳಿದ್ದವರು ಬೆಂಗಳೂರಿಗೆ ವಾಪಾಸಾಗುವ ಮಾರ್ಗದಲ್ಲಿ ದುಬೈ ಏರ್ ಪೋರ್ಟ್ ನಲ್ಲಿ ಬಾಕಿಯಾಗಿದ್ದಾರೆ.
ಅಲ್ಲದೇ, ಹಲವು ಕನ್ನಡಿಗ ಪ್ರಯಾಣಿಕರು ಕೂಡಾ ದುಬೈ ಏರ್ ಪೋರ್ಟ್ ನಲ್ಲೇ ವಿಮಾನ ಹಾರಾಟ ಸ್ಥಗಿತಗೊಂಡಿರುವ ಕಾರಣ ಉಳಿದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ದೋಹಾ, ಕತಾರ್, ಅಬುಧಾಬಿ ಮತ್ತು ಯುಎಇ ಯಲ್ಲಿರುವ ಅಮೆರಿಕಾ ಸೇನಾ ನೆಲೆಗಳ ಮೇಲೆ ಇರಾನ್ ನಿಂದ ಕ್ಷಿಪಣಿ ದಾಳಿ ನಡೆದಿದೆ.


