Thursday, May 2, 2024
Homeತಾಜಾ ಸುದ್ದಿಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ: ಪೊಲೀಸರ ಫೋನ್ ನಿಂದಲೇ ಪ್ರೇಯಸಿಗೆ ಕರೆ ಮಾಡಿದ ಆರೋಪಿ ವೈಭವ್...

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ: ಪೊಲೀಸರ ಫೋನ್ ನಿಂದಲೇ ಪ್ರೇಯಸಿಗೆ ಕರೆ ಮಾಡಿದ ಆರೋಪಿ ವೈಭವ್ ಜೈನ್…

spot_img
- Advertisement -
- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಲೇ ಇದೆ. ಈಗಾಗಲೇ ಈ ಪ್ರಕರಣದಲ್ಲಿ ಸಾಕಷ್ಟು ಆರೋಪಿಗಳು ಜೈಲು ಸೇರಿದ್ದಾರೆ. ಜೈಲು ಸೇರಿದ್ರೂ ಕೆಲವು ಆರೋಪಿಗಳು ಅಲ್ಲೂ ತಮ್ಮ ಬುದ್ಧಿ ಮಾತ್ರ ಬಿಟ್ಟಿಲ್ಲ.

ಈ ಪ್ರಕರಣದಲ್ಲಿ ಜೈಲು ಸೇರಿರುವ ಉದ್ಯಮಿ ವೈಭವ್ ಜೈನ್ ಅಲ್ಲಿಂದಲೂ ತನ್ನ ಕಿತಾಪತಿ ಮುಂದುವರೆಸಿದ್ದಾನೆ. ವೈಭವ್ ಜೈನ್ ಪತ್ನಿಗೆ ಕರೆ ಮಾಡುವುದಾಗಿ ಹೇಳಿ ಪೊಲೀಸರಿಂದ ಮೊಬೈಲ್ ಪಡೆದು ಗೆಳತಿಗೆ ಕರೆ ಮಾಡಿರುವ ಸಂಗತಿ ಈಗ ಬಹಿರಂಗವಾಗಿದೆ.

ತನ್ನ ವಿವಾಹ ವಾರ್ಷಿಕೋತ್ಸವವಿದ್ದು, ಪತ್ನಿಗೆ ಶುಭ ಕೋರುವುದಕ್ಕೆ ವೈಭವ್ ಜೈನ್ ಹೇಳಿದಾಗ ಇದನ್ನು ನಂಬಿದ ಪೊಲೀಸರು ಫೋನ್ ನೀಡಿದ್ದರು. ವೈಭವ್ ಜೈನ್ ಕೆಲ ಹೊತ್ತು ಫೋನ್ ನಲ್ಲಿ ಮಾತನಾಡಿದ್ದ. ಇದಾದ ಮರುದಿನವೇ ವೈಭವ್ ಜೈನ್ ಪತ್ನಿ, ಪತಿಯನ್ನು ನೋಡಲು ಬಂದಿದ್ದಾರೆ. ಆಗ ಪೊಲೀಸರು ನಿಮಗೆ ಕರೆ ಮಾಡಿದ್ದರಲ್ವ ಎಂದಾಗ ಆಕೆ ಇಲ್ಲ ಎಂದು ಉತ್ತರಿಸಿದ್ದಾರೆ.

ಆಗ ಗಲಿಬಿಲಿಗೊಂಡ ಪೊಲೀಸರು ಪರಿಶೀಲನೆ ನಡೆಸಿದ ವೇಳೆ ವೈಭವ್ ಜೈನ್ ತನ್ನ ಗೆಳತಿಗೆ ಕರೆ ಮಾಡಿರುವುದು ತಿಳಿದುಬಂದಿದೆ. ಆಕೆ ಮಾಡೆಲ್ ಎಂದು ಹೇಳಲಾಗಿದ್ದು, ಇದೀಗ ಪೊಲೀಸರು ಆಕೆಯ ವಿಚಾರಣೆಗೆ ಮುಂದಾಗಿದ್ದಾರೆ ಎನ್ನಲಾಗಿದೆ

- Advertisement -
spot_img

Latest News

error: Content is protected !!