Friday, April 19, 2024
Homeಉದ್ಯಮಗುಜರಿಪಾಲಾಗುತ್ತಿದ್ದಾಳೆ ವಿಶ್ವದ ಓಲ್ಡ್‌ ಲೇಡಿ!….ಬಾಯ್ ಬಾಯ್ 'ವಿರಾಟ್‌'

ಗುಜರಿಪಾಲಾಗುತ್ತಿದ್ದಾಳೆ ವಿಶ್ವದ ಓಲ್ಡ್‌ ಲೇಡಿ!….ಬಾಯ್ ಬಾಯ್ ‘ವಿರಾಟ್‌’

spot_img
- Advertisement -
- Advertisement -

ಮುಂಬೈ: ಭಾರತೀಯ ನೌಕಾಪಡೆಯಲ್ಲಿ 30ವರ್ಷಕಾಲ ಸುದೀರ್ಘ ಸೇವೆ ಸಲ್ಲಿಸಿ 3 ವರ್ಷದ ಹಿಂದಷ್ಟೇ ನಿವೃತ್ತಿಯಾಗಿದ್ದ ಐಎನ್‌ಎಸ್‌ ವಿರಾಟ್‌ ನೌಕೆ ಇಂದು ತನ್ನ ಕೊನೆಯ ಪ್ರಯಾಣ ಬೆಳೆಸಲಿದೆ. ಈ ನೌಕೆಯನ್ನು ಮ್ಯೂಸಿಯಂ ಅಥವಾ ರೆಸ್ಟೋರೆಂಟ್‌ ಆಗಿ ಪರಿವರ್ತಿಸುವ ಯೋಜನೆಯಿತ್ತು ಆದರೆ, ಅಂತಿಮವಾಗಿ ನೌಕೆಯನ್ನು ಗುಜರಿಗೆ ಹಾಕುವ ನಿರ್ಧಾರವವನ್ನು ಕೈಗೊಳ್ಳಲಾಗಿದೆ.


ಮುಂಬೈನ ನೌಕಾ ಡಾಕ್‌ಯಾರ್ಡ್‌ನಿಂದ ಗುಜರಾತ್‌ನ ಭಾವನಗರ ಜಿಲ್ಲೆಯಲ್ಲಿರುವ ಅಲಾಂಗ್‌ನಲ್ಲಿರುವ ಬಂದರಿಗೆ ವಿರಾಟ್‌ ನೌಕೆಯನ್ನು ತಂದು ಅಲ್ಲಿ ಅದನ್ನು ಒಡೆದು ಗುಜರಿಗೆ ಹಾಕಲು ನಿರ್ಧರಿಸಲಾಗಿದೆ. ಈ ನೌಕೆಯನ್ನು ಶ್ರೀರಾಮ್‌ ಗ್ರೂಪ್‌ 38.54 ಕೋಟಿ ರು.ಗೆ ಪಡೆದುಕೊಂಡಿದ್ದು, ಮುಂದಿನ 9 ರಿಂದ 12 ತಿಂಗಳಲ್ಲಿ ಯುದ್ಧನೌಕೆಯನ್ನು ಒಡೆದು ಗುಜರಿಗೆ ಹಾಕಲಾಗುತ್ತದೆ.


1959ರಿಂದ 1984ರವರೆಗೆ ಬ್ರಿಟಿಷ್‌ ನೌಕಾ ಪಡೆಯಲ್ಲಿ ವಿರಾಟ್‌ ಕಾರ್ಯನಿರ್ವಹಿಸಿತ್ತು. 80ರ ದಶಕದಲ್ಲಿ ಈ ನೌಕೆಯನ್ನು ಭಾರತ ಖರೀದಿಸಿತ್ತು.ಐಎನ್‌ಎಸ್‌ ವಿರಾಟ್‌ ವಿಶ್ವದಲ್ಲೇ ಅತೀ ದೀರ್ಘಕಾಲ ಸೇವೆ ಸಲ್ಲಿಸಿದ ಗಿನ್ನೆಸ್‌ ದಾಖಲೆಯನ್ನು ಸಹ ನಿರ್ಮಿಸಿದೆ. ಈ ಕಾರಣಕ್ಕೆ ಐಎನ್‌ಎಸ್‌ ವಿರಾಟ್‌ ‘ವಿಶ್ವದ ಓಲ್ಡ್‌ ಲೇಡಿ’ ಎಂಬ ಖ್ಯಾತಿ ಪಡೆದಿದೆ. ಅಲ್ಲದೇ 27 ಬಾರಿ ಭೂಮಿಯನ್ನು ಸುತ್ತಿರುವ ಖ್ಯಾತಿ ಈ ನೌಕೆಗೆ ಇದೆ.

- Advertisement -
spot_img

Latest News

error: Content is protected !!