Friday, June 5, 2026
Homeತಾಜಾ ಸುದ್ದಿಡ್ರಗ್ಸ್ ಸಾಗಾಟ ಪ್ರಕರಣ : ಮಂಗಳೂರಿನಲ್ಲಿ ಡ್ಯಾನ್ಸರ್ ಕಿಶೋರ್ ಶೆಟ್ಟಿ ಸೆರೆ

ಡ್ರಗ್ಸ್ ಸಾಗಾಟ ಪ್ರಕರಣ : ಮಂಗಳೂರಿನಲ್ಲಿ ಡ್ಯಾನ್ಸರ್ ಕಿಶೋರ್ ಶೆಟ್ಟಿ ಸೆರೆ

- Advertisement -
- Advertisement -

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ  ಸಿಸಿಬಿ ಪೊಲೀಸರು ಅನೇಕರ ಜನ್ಮ ಜಾಲಾಡುತ್ತಿದ್ದಾರೆ. ಎಲ್ಲಿಂದ ಎಲ್ಲಿಗೆ ಲಿಂಕ್ ಅಂತಾ ಊಹಿಸೋದಕ್ಕೂ ಸಾಧ್ಯವಾಗುತ್ತಿಲ್ಲ. ಇದೀಗ ಮಂಗಳೂರಿನಲ್ಲಿ ಡ್ರಗ್ಸ್ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಖ್ಯಾತ ಡ್ಯಾನ್ಸರ್ ಕಿಶೋರ್ ಶೆಟ್ಟಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕಿಶೋರ್ ಶೆಟ್ಟಿ ಹಿಂದಿಯ ABCD ಸಿನಿಮಾದಲ್ಲಿ ನಟಿಸಿದ್ದ. ಅಲ್ಲದೇ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ನಲ್ಲೂ ಸ್ಪರ್ಧಿಯಾಗಿದ್ದ . ಇನ್ನು ಈತನ ಬಂಧನದ ಬಗ್ಗೆ ಇಂದು ಮಂಗಳೂರು ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುವ ಸಾಧ್ಯತೆಯಿದೆ.

ಈತನ ಬಂಧನದಿಂದಾಗಿ ಈತನ ಜೊತೆಗಿದ್ದ ಒಂದಷ್ಟು ಮಂದಿಗೆ ಢವಢವ ಶುರುಮಾಗಿರೋದಂತೂ ಸುಳ್ಳಲ್ಲ. ಈತನ ಬಾಯಿಂದ ಇನ್ನೊಂದಷ್ಟು ಹೆಸರುಗಳು ಹೊರ ಬರೋದಂತೂ ಪಕ್ಕಾ..

- Advertisement -

Latest News

error: Content is protected !!