Monday, May 6, 2024
Homeತಾಜಾ ಸುದ್ದಿನಿಷೇಧಾಜ್ಞೆಯ ಮಧ್ಯೆಯೂ ಭರ್ಜರಿ ಮದ್ಯ ಮಾರಾಟ: ನಿನ್ನೆ ಒಂದೇ ದಿನ ರಾಜ್ಯದಲ್ಲಿ ಮಾರಾಟವಾದ ಮದ್ಯ ಎಷ್ಟು...

ನಿಷೇಧಾಜ್ಞೆಯ ಮಧ್ಯೆಯೂ ಭರ್ಜರಿ ಮದ್ಯ ಮಾರಾಟ: ನಿನ್ನೆ ಒಂದೇ ದಿನ ರಾಜ್ಯದಲ್ಲಿ ಮಾರಾಟವಾದ ಮದ್ಯ ಎಷ್ಟು ಗೊತ್ತಾ?

spot_img
- Advertisement -
- Advertisement -

ಬೆಂಗಳೂರು : 2021ರ ಹೊಸ ವರ್ಷವನ್ನು ಜನ ಕೊರೊನಾ ಆತಂಕದ ಮಧ್ಯೆ ಸೂಪರ್ ಆಗಿಯೇ ವೆಲ್ ಕಮ್ ಮಾಡಿದ್ದಾರೆ. ಇನ್ನು ಹೊಸ ವರ್ಷದ ಸಂಭ್ರಮಾಚರಣೆಗೆ ನಿಷೇಧಾಜ್ಞೆ ಅಡ್ಡಿಯಾದ್ರೂ,  ಮದ್ಯ ಮಾರಾಟದಲ್ಲೇನು ಕಡಿಮೆಯಾಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದ್ರೇ, ಈ ಬಾರಿ ಹಾಟ್ ಡ್ರಿಂಕ್ಸ್ ಹಾಗೂ ಬಿಯರ್ ಮಾರಾಟದಲ್ಲಿ ರಾಜ್ಯದಲ್ಲಿ ತುಸು ಹೆಚ್ಚಳ ಕೂಡ ಆಗಿದೆ. ನಿನ್ನೆ ಒಂದೇ ದಿನ ಬರೋಬ್ಬರಿ 150.94 ಕೋಟಿ ರೂ ಮದ್ಯ ಬಿಕರಿಯಾಗಿದೆ. ಈ ಮೂಲಕ ಕಳೆದ ಎರಡು ವರ್ಷದಲ್ಲಿಯೇ ಅತ್ಯಧಿಕ ಮೌಲ್ಯದ ಮದ್ಯ ರಾಟವಾಗಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ರಾಜ್ಯ ಅಬಕಾರಿ ಇಲಾಖೆಯ ಮೂಲಗಳಿಂದ ಮಾಹಿತಿ ತಿಳಿದು ಬಂದಿದ್ದು, 2019ರ ಡಿಸೆಂಬರ್ 31ರಂದು 119.97 ಕೋಟಿ ರೂಪಾಯಿ ಮೌಲ್ಯದ 3.62 ಲಕ್ಷ ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್ ಹಾಗೂ 1.30 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಈ ವರ್ಷದಲ್ಲಿ 120.21 ಕೋಟಿ ಮೌಲ್ಯದ 2.23 ಲಕ್ಷ ಬಾಕ್ಸ್ ಐಎಂಎಲ್ ಹಾಗೂ 30.73 ಕೋಟಿ ಮೌಲ್ಯದ 1.73 ಲಕ್ಷ ಬಾಕ್ ಬಿಯರ್ ಸೇರಿದಂತೆ ಒಟ್ಟು 150.94 ಕೋಟಿ ರೂಪಾಯಿ ಮೌಲ್ಯದ ಮದ್ಯ ರಾಜ್ಯದಲ್ಲಿ ಮಾರಾಟವಾಗಿದೆ.

ಅಂದಹಾಗೇ ಕಳೆದ ನಾಲ್ಕು ದಿನಗಳಿಂದ ರಾಜ್ಯದಲ್ಲಿ ಮಾರಾಟವಾದಂತ ಮದ್ಯ ಮಾತ್ರ 571 ಕೋಟಿ ರೂಪಾಯಿಯಷ್ಟು ಆಗಿದೆ. ಕಳೆದ ಎರಡು ವರ್ಷಕ್ಕೆ ಹೋಲಿಸಿದ್ರೇ, ಈ ಬಾರಿ ಮದ್ಯ ಮಾರಾಟದ ವಹಿವಾಟಿನಲ್ಲಿ ಕೊರೋನಾ ಸೋಂಕಿನ ಭೀತಿಯ ನಡುವೆ ಹಲವು ಜಿಲ್ಲೆಗಳು, ಬೆಂಗಳೂರು ನಗರದಲ್ಲಿ ನಿಷೇಧಾಜ್ಞೆಯ ನಡುವೆಯೂ ತುಸು ಹೆಚ್ಚಳವಾಗಿದೆ.

ಡಿಸೆಂಬರ್ 28ರಂದು 166.65 ಕೋಟಿ ರೂಪಾಟಿ ಮೌಲ್ಯದ ಮದ್ಯ ಮಾರಾಟವಾಗಿದ್ದರೇ, ಡಿಸೆಂಬರ್ 29ರಂದು 131.41 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. ಡಿಸೆಂಬರ್ 30ರಂದು 40.27 ಕೋಟಿ ರೂಪಾಯಿ ವಹಿವಾಟು ನಡೆದಿರುವ ಬಗ್ಗೆ ರಾಜ್ಯ ಅಬಕಾರಿ ಇಲಾಖೆಯ ಮೂಲಗಳಿಂದ ಮಾಹಿತಿ ನೀಡಿದೆ.

- Advertisement -
spot_img

Latest News

error: Content is protected !!