Monday, May 27, 2024
Homeತಾಜಾ ಸುದ್ದಿಮುಖಕ್ಕೆ ಹಚ್ಚುವ ಫೇಸ್ ಕ್ರೀಂ ತಿಂದು 2 ವರ್ಷದ ಕಂದಮ್ಮ ಸಾವು

ಮುಖಕ್ಕೆ ಹಚ್ಚುವ ಫೇಸ್ ಕ್ರೀಂ ತಿಂದು 2 ವರ್ಷದ ಕಂದಮ್ಮ ಸಾವು

spot_img
- Advertisement -
- Advertisement -

ಮೈಸೂರು: ಮುಖಕ್ಕೆ ಹಚ್ಚುವ ಫೇಸ್ ಕ್ರೀಂ ತಿಂದು ಮಗುವೊಂದು ಸಾವನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಬೆಳಗನಹಳ್ಳಿ ಯಲ್ಲಿ ನಡೆದಿದೆ. ಎಚ್.ಡಿ.ಕೋಟೆ ತಾಲ್ಲೂಕಿನ ಬೆಳಗನಹಳ್ಳಿ ಗ್ರಾಮದ ಗ್ರಾಮದ ಮಹೇಶ್-ಕನ್ಯಾ ದಂಪತಿಯ ಪುತ್ರ ಮನ್ವಿಷ್ ಮೃತಪಟ್ಟ ಮಗು.

ಮನ್ವಿಷ್‌, ಬುಧವಾರ ಸಂಜೆ ವೇಳೆ ಮನೆಯಲ್ಲಿ ಆಟವಾಡುತ್ತಿದ್ದಾಗ ಮುಖಕ್ಕೆ ಹಚ್ಚುವ ಕ್ರೀಂ ತಿಂದಿದ್ದಾನೆ. ಇದು ಪೋಷಕರ ಗಮನಕ್ಕೆ ಬಂದಿಲ್ಲ. ರಾತ್ರಿ 10 ಗಂಟೆ ಸಮಯದಲ್ಲಿ ವಾಂತಿ ಮಾಡಿಕೊಂಡಿದ್ದಾನೆ. ಮಗುವನ್ನು ತಕ್ಷಣವೇ ಚಿಕಿತ್ಸೆಗಾಗಿ ಎಚ್.ಡಿ.ಕೋಟೆ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಊಟೋಪಚಾರದ ಬಗ್ಗೆ ಪ್ರಶ್ನಿಸಿದ್ದಾರೆ. ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಫೇಸ್‌ ಕ್ರೀಂ ತಿಂದಿರುವುದು ಗೊತ್ತಾಗಿದೆ. ಚಿಕಿತ್ಸೆಗೆ ಸ್ಪಂದಿಸದ ಮಗು ನಿನ್ನೆ ಮೃತಪಟ್ಟಿದೆ.

- Advertisement -
spot_img

Latest News

error: Content is protected !!