Monday, May 27, 2024
Homeತಾಜಾ ಸುದ್ದಿಸೌದಿ ಅರೇಬಿಯಾದ ಶವಪೆಟ್ಟಿಗೆ ಕಾಣಿಸಿಕೊಂಡಿದ್ದು ಬ್ರಿಟನ್ ನಲ್ಲಿ- ಮುಂಜಾನೆ ವಾಕಿಂಗ್‌ಗೆ ಹೊರಟಿದ್ದ ವ್ಯಕ್ತಿಗೆ ಗಾಬರಿ ಮೂಡಿಸಿದ...

ಸೌದಿ ಅರೇಬಿಯಾದ ಶವಪೆಟ್ಟಿಗೆ ಕಾಣಿಸಿಕೊಂಡಿದ್ದು ಬ್ರಿಟನ್ ನಲ್ಲಿ- ಮುಂಜಾನೆ ವಾಕಿಂಗ್‌ಗೆ ಹೊರಟಿದ್ದ ವ್ಯಕ್ತಿಗೆ ಗಾಬರಿ ಮೂಡಿಸಿದ ಶವಪೆಟ್ಟಿಗೆ!…

spot_img
- Advertisement -
- Advertisement -

ಬ್ರಿಟನ್: ಇಲ್ಲಿನ ವ್ಯಕ್ತಿಯೋರ್ವ ವಾಕಿಂಗ್‌ಗೆ ಹೋಗುತ್ತಿರುವ ಸಂದರ್ಭದಲ್ಲಿ ಮಾರ್ಗಮಧ್ಯದಲ್ಲಿ
ಖಾಲಿ ಶವಪೆಟ್ಟಿಗೆಯೊಂದು ಕಾಣಸಿಕ್ಕಿದೆ.ಅದನ್ನು ಕಂಡು ಆ ವ್ಯಕ್ತಿ ಶಾಕ್ ಆಗಿದ್ದಾರೆ. ಪ್ರವಾಹದ ನೀರಿನಲ್ಲಿ ತೇಲಿಕೊಂಡು ಬಂದಿದ್ದ ಈ ಶವಪೆಟ್ಟಿಗೆ ಅಲ್ಲಿಗೆ ಬಂದು ಬಿದ್ದಿತ್ತು.ಸೌದಿ ಅರೇಬಿಯಾದ ಆರೋಗ್ಯ ಇಲಾಖೆಗೆ ಸೇರಿದ ಶವಪೆಟ್ಟಿಗೆ ಇದಾಗಿದೆ.

ಬ್ರಿಟನ್ ನ ನ್ನಾರ್ಥಾಂಪ್ಟನ್‌ನ ಅಬಿಂಗ್ಟನ್ ಮೆಡೋಸ್‌ನಲ್ಲಿ ವಾಕಿಂಗ್ ಮಾಡುತ್ತಿದ್ದ ರಸೆಲ್ ಮೂರ್‌ ಹಾಗು ಅವರ ಸಹೋದರಿ ಈ ಪೆಟ್ಟಿಗೆಯನ್ನು ಗಮನಿಸಿದ್ದಾರೆ. ಅದರ ಮೇಲೆ ಅರೇಬಿಕ್ ಭಾಷೆಯ ಅಕ್ಷರಗಳು ಕಂಡಿವೆ.ನೆನೆ ನದಿಯ ಪ್ರವಾಹದಲ್ಲಿ ಈ ಪೆಟ್ಟಿಗೆ ಕೊಚ್ಚಿಕೊಂಡು ಬಂದು ಇಲ್ಲಿ ಬಿದ್ದಿತ್ತು. ಈ ಶವಪೆಟ್ಟಿಗೆ ಬ್ರಿಟನ್‌ಗೆ ಹೇಗೆ ಬಂದು ಸೇರಿದೆ ಎಂಬುದು ಸಧ್ಯ ಕುತೂಹಲ ಮೂಡಿಸಿದೆ.

- Advertisement -
spot_img

Latest News

error: Content is protected !!