ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ಲಕ್ಷ್ಮಿ ಸ್ಥಾನ ನೀಡಲಾಗಿದೆ. ಮಹಿಳೆಯರು ಮಾಡುವ ಮೂರು ಕೆಲಸಗಳನ್ನು ನೋಡಬಾರದು ಎನ್ನಲಾಗಿದೆ. ಮಹಿಳೆ ಮಾಡುವ ಆ ಕೆಲಸಗಳನ್ನು ನೋಡುವುದು ಪಾಪದ ಕೆಲಸವಂತೆ. ಇದ್ರಿಂದ ಸಾಕಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಮಹಿಳೆ ಸ್ನಾನ ಮಾಡುವುದನ್ನು ನೋಡುವುದು ಧರ್ಮ ಗ್ರಂಥಗಳಲ್ಲಿ ಒಂದು ದೊಡ್ಡ ಪಾಪ. ಇದನ್ನು ನೋಡಿದ್ರೆ ಶಿಕ್ಷೆ ಪ್ರಾಪ್ತವಾಗುತ್ತದೆ. ಹಾಗೆ ಮಹಿಳೆ ಸ್ನಾನ ಮಾಡುವಾಗ ಬಟ್ಟೆ ಧರಿಸಬೇಕು. ಇದನ್ನು ಉಚಿತವೆಂದು ಪರಿಗಣಿಸಲಾಗಿದೆ.
ಮಹಿಳೆ ಮಗುವಿಗೆ ಹಾಲು ಕುಡಿಸುವುದನ್ನು ಎಂದಿಗೂ ನೋಡಬಾರದು. ಮಗು, ತಾಯಿಯ ಗರ್ಭದಿಂದ ಜನಿಸಿದ ನಂತ್ರ ಹಾಲಿಗಾಗಿ ತನ್ನ ತಾಯಿಯನ್ನು ಅವಲಂಬಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಒಬ್ಬ ಮಹಿಳೆ, ಮಗುವಿಗೆ ಹಾಲುಣಿಸುವುದನ್ನು ನೋಡಿದರೆ, ಪಾಪ ಸುತ್ತಿಕೊಳ್ಳುತ್ತದೆ.
ಮಹಿಳೆಗೆ ಬಟ್ಟೆ ಧರಿಸಿದಾಗ ಗೌರವ ಪ್ರಾಪ್ತಿಯಾಗುತ್ತದೆ. ಹಾಗಾಗಿ ಮಹಿಳೆ ಬಟ್ಟೆ ಬದಲಿಸುವಾಗ ನೋಡಬಾರದು. ಇದರಿಂದ ಪಾಪ ಪ್ರಾಪ್ತಿಯಾಗುತ್ತದೆ.