- Advertisement -
- Advertisement -
ಬೆಳ್ಳಾರೆ: ಕೊರೋನಾ ಮಹಾಮಾರಿ ವಿರುದ್ಧ ತಮ್ಮ ಜೀವವನ್ನು ಪಣಕಿಟ್ಟು ಸೇವೆ ಸಲ್ಲಿಸುತ್ತಿರುವ ಸರಕಾರಿ ಅಧಿಕಾರಿ ವರ್ಗದವರಿಗೆ, ಅರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಬೆಳ್ಳಾರೆ ಜೇಸಿ ವತಿಯಿಂದ ಪ್ರತಿ ದಿನ ಉಚಿತ ಊಟ,ಚಾ,ತಿಂಡಿ ವ್ಯವಸ್ಥೆ ಮಾಡಲಾಗಿದೆ.
ಈ ಉತ್ತಮ ಕಾರ್ಯ ಇನ್ನಷ್ಟು ಯಶಸ್ವಿಯಾಗುವ ಉದ್ದೇಶದಿಂದ ನಿವೃತ್ತ ಕಸ್ಟಮ್ಸ್ ಅಧಿಕಾರಿ ಕುರುಂಬುಡೇಲು ರಾಮಕೃಷ್ಣ ಭಟ್ ಮತ್ತು ಚಂದ್ರಾ ಕೋಲ್ಚಾರ್ ರವರು ಆರ್ಥಿಕ ನೆರವು ನೀಡಿದರು.
ಈ ನೆರವನ್ನು ಸೇವಾ ಭಾರತಿಯವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಎಸ್.ಐ.ಆಂಜನೇಯ ರೆಡ್ಡಿಯವರಿಗೆ ಹಸ್ತಾಂತರಿಸಿದ್ದು. ಅದನ್ನು ಎಸ್.ಐ.ಯವರು ಬೆಳ್ಳಾರೆಯ ಜೇಸಿ ಸೇವಾ ಕೇಂದ್ರಕ್ಕೆ ನೀಡಿದರು.
ಈ ಸಂದರ್ಭದಲ್ಲಿ ಪ್ರೇಮಚಂದ್ರ ಬೆಳ್ಳಾರೆ ,ಚಂದ್ರಶೇಖರ ಪನ್ನೆ,ವೀರನಾಥ ಸಿ.ಕೂಪ್,ಜಯರಾಮ ಉಮಿಕ್ಕಳ, ನಾಗೇಶ್ ಕುಲಾಲ್ ಉಪಸ್ಥಿತರಿದ್ದರು.
- Advertisement -