Friday, June 5, 2026
Homeತಾಜಾ ಸುದ್ದಿ11ನೇ ಮಹಡಿಯಿಂದ ಹಾರಿ ಪ್ರತಿಷ್ಟಿತ ಆಸ್ಪತ್ರೆಯ ವೈದ್ಯ ಆತ್ಮಹತ್ಯೆ: ಮೂರು ತಿಂಗಳ ಹಿಂದೆಯಷ್ಟೇ ವೈದ್ಯೆಯನ್ನು ವಿವಾಹವಾಗಿದ್ದಾತ...

11ನೇ ಮಹಡಿಯಿಂದ ಹಾರಿ ಪ್ರತಿಷ್ಟಿತ ಆಸ್ಪತ್ರೆಯ ವೈದ್ಯ ಆತ್ಮಹತ್ಯೆ: ಮೂರು ತಿಂಗಳ ಹಿಂದೆಯಷ್ಟೇ ವೈದ್ಯೆಯನ್ನು ವಿವಾಹವಾಗಿದ್ದಾತ ಸಾವಿಗೆ ಶರಣಾಗಿದ್ದ್ಯಾಕೆ?

- Advertisement -
- Advertisement -

ಬೆಂಗಳೂರು: ಪ್ರತಿಷ್ಠಿತ ವಿಕ್ಟೋರಿಯಾ ಆಸ್ಪತ್ರೆ ವೈದ್ಯರೊಬ್ಬರು ಅಪಾರ್ಟ್‍ಮೆಂಟ್‌ ನ 11ನೇ ಮಹಡಿ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಬ್ಬಾಳದ ಗೋದ್ರೆಜ್ ಅಪಾರ್ಟ್‍ಮೆಂಟ್‍ ವಾಸವಾಗಿದ್ದ ಪೃಥ್ವಿ ರಾಜ್ ರೆಡ್ಡಿ (31) ಆತ್ಮಹತ್ಯೆ ಮಾಡಿಕೊಂಡ ವೈದ್ಯ.

ಪೃಥ್ವಿರಾಜ್, ಮೂರು ತಿಂಗಳ ಹಿಂದೆಯಷ್ಟೇ ವೈದ್ಯೆಯನ್ನ ಮದುವೆ ಆಗಿದ್ದರು. ಗಂಡ-ಹೆಂಡತಿ ಇಬ್ಬರು ಕೂಡ ವಿಕ್ಟೊರಿಯಾ ಆಸ್ಪತ್ರೆಯಲ್ಲೇ ವೈದ್ಯರಾಗಿ ಕೆಲಸ ಮಾಡಿಕೊಂಡಿದ್ದರು.

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪೃಥ್ವಿ ರಾಜ್‌ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿದ್ದಾರೆ. ಮೊಬೈಲ್ ನಲ್ಲಿ ತೆಲುಗು ಭಾಷೆಯಲ್ಲಿ ಡೆತ್ ನೋಟ್ ಬರೆದಿಡಲಾಗಿದ್ದು, ಪೊಲೀಸರು ಮೊಬೈಲ್ ವಶಕ್ಕೆ ಪಡೆದು ತನಿಖೆ ಮಾಡಲಾಗುತ್ತಿದೆ. ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!