Wednesday, June 3, 2026
Homeತಾಜಾ ಸುದ್ದಿಮತಾಂತರಗೊಳ್ಳುವ SC, STಯವರಿಗೆ ಮೀಸಲಾತಿ ನೀಡಬೇಡಿ: ಸರ್ಕಾರಕ್ಕೆ ಮನವಿ ಮಾಡಿದ VHP ರಾಷ್ಟ್ರೀಯ ಕಾರ್ಯಾಧ್ಯಕ್ಷ

ಮತಾಂತರಗೊಳ್ಳುವ SC, STಯವರಿಗೆ ಮೀಸಲಾತಿ ನೀಡಬೇಡಿ: ಸರ್ಕಾರಕ್ಕೆ ಮನವಿ ಮಾಡಿದ VHP ರಾಷ್ಟ್ರೀಯ ಕಾರ್ಯಾಧ್ಯಕ್ಷ

- Advertisement -
- Advertisement -

ಬೆಂಗಳೂರು: ಮತಾಂತರಗೊಳ್ಳುವ SC, STಯವರಿಗೆ ಮೀಸಲಾತಿ ನೀಡಬೇಡಿ. ಹಿಂದೂ ಧರ್ಮದಲ್ಲಿರುವ SC, STಯವರಿಗೆ ಮಾತ್ರ ಮೀಸಲಾತಿ ನೀಡಿ ಎಂದು ವಿಹೆಚ್​​ಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಅನ್ಯ ಧರ್ಮಕ್ಕೆ ಮತಾಂತರಗೊಂಡು ಮೀಸಲಾತಿ ಪಡೆಯುತ್ತಿದ್ದಾರೆ. ಇದರಿಂದ ಹಿಂದೂ ಧರ್ಮದಲ್ಲಿರುವ ದಲಿತರಿಗೆ ಅನ್ಯಾಯ ಆಗಲಿದೆ. ಹೀಗಾಗಿ ಕೇಂದ್ರ ಸರ್ಕಾರ ಭಾರತದ ನಿವೃತ್ತ ಮುಖ್ಯ ನ್ಯಾಯ ಮೂರ್ತಿ ಕೆ.ಜಿ ಬಾಲಕೃಷ್ಣನ್ ನೇತೃತ್ವದಲ್ಲಿ ಮೀಸಲಾತಿ ಕಮಿಟಿ ರಚನೆ ಮಾಡಿದೆ‌. ಮೀಸಲಾತಿ ಸಮಿತಿ ಬಗ್ಗೆ ಕೇಂದ್ರ ಸರ್ಕಾರ ವಿಸ್ತೃತ ಸಮಾಲೋಚನೆ ಆಗಬೇಕಿದೆ ಎಂದು VHP ರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ತಿಳಿಸಿದರು.

- Advertisement -

Latest News

error: Content is protected !!