Friday, April 26, 2024
Homeತಾಜಾ ಸುದ್ದಿದೇಶದ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳಿಗೆ ಪ್ರಧಾನಿ ಮೋದಿ ಚಾಲನೆ: ಬೆಂಗಳೂರಿನಲ್ಲಿ ಡಿಜಿಯು ಉದ್ಘಾಟಿಸಿದ ಕೇಂದ್ರ...

ದೇಶದ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳಿಗೆ ಪ್ರಧಾನಿ ಮೋದಿ ಚಾಲನೆ: ಬೆಂಗಳೂರಿನಲ್ಲಿ ಡಿಜಿಯು ಉದ್ಘಾಟಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

spot_img
- Advertisement -
- Advertisement -

ಬೆಂಗಳೂರು: ಡಿಜಿಟಲ್ ಇಂಡಿಯಾ ಕನಸಿಗೆ ಪುಷ್ಟಿ ನೀಡುವ ನಿಟ್ಟಿನಲ್ಲಿ ಹಾಗೂ ಭಾರತದಲ್ಲಿ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ, ದೇಶದ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳ ಉದ್ಘಾಟನೆಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಆಗಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಕೆನರಾ ಬ್ಯಾಂಕ್ ಸ್ಥಾಪಿಸಿರುವ ಡಿಜಿಟಲ್ ಬ್ಯಾಂಕಿಂಗ್ ಯೂನಿಟ್‌ ಅನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಲಿಂಗಂ ಪ್ರಭಾಕರ್, ಬೆಂಗಳೂರು ಸರ್ಕಲ್ ಸಿಜಿಎಂ ದೇಬಾನಂದ ಸಾಹೂ ಹಾಗೂ ಇತರ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

24 ಗಂಟೆಗಳ ಕಾಲ ತೆರೆದಿರುವ ಸ್ವಯಂ ಸೇವಾ ವಲಯ,ನಗದು ಹಿಂಪಡೆಯುವಿಕೆ ಮತ್ತು ಠೇವಣಿ, ಖಾತೆ ತೆರೆಯುವಿಕೆ, ಎಫ್ ಡಿ ಮತ್ತು ಆರ್ ಡಿ, ಡಿಜಿಟಲ್ ಸಾಲಗಳು, ಪಾಸ್‌ಬುಕ್ ಮುದ್ರಣ, ಬಾಕಿ ವಿಚಾರಣೆ ಹಾಗೂ
ನಿಧಿ ವರ್ಗಾವಣೆ ಸೌಲಭ್ಯಗಳು ಡಿಜಿಟಲ್ ಬ್ಯಾಂಕಿಂಗ್ ಯುನಿಟ್ ನಲ್ಲಿ ಲಭ್ಯವಿರಲಿವೆ.

- Advertisement -
spot_img

Latest News

error: Content is protected !!