Wednesday, June 3, 2026
Homeತಾಜಾ ಸುದ್ದಿಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಲಿ: ಒಕ್ಕಲಿಗ ಮೀಸಲಾತಿ ವಿಚಾರಕ್ಕೆ ಮಾಜಿ ಸಿಎಂ ಡಿ.ವಿ. ಸದಾನಂದ...

ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಲಿ: ಒಕ್ಕಲಿಗ ಮೀಸಲಾತಿ ವಿಚಾರಕ್ಕೆ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಪ್ರತಿಕ್ರಿಯೆ

- Advertisement -
- Advertisement -

ಬೆಂಗಳೂರು: ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ಸಮುದಾಯದ ಜನಸಂಖ್ಯೆಗೆ ಅನುಸಾರವಾಗಿ ಮೀಸಲಾತಿ ಹೆಚ್ಚಿಸಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಸದಾನಂದ ಗೌಡ, ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಹೆಚ್ಚಿಸಬೇಕು ಅಂತಾ ನಮ್ಮ‌ ಸಂವಿಧಾನದಲ್ಲೇ ಇರುವ ಕಾರಣ ಅದಕ್ಕೆ ಸರಿಯಾದ ರೀತಿಯಲ್ಲಿ ಮೀಸಲಾತಿ ಹೆಚ್ಚಿಸಬೇಕು ಎಂದು ಹೇಳಿದ್ದಾರೆ.

ಅಲ್ಲದೇ ತಮಿಳುನಾಡಿನಲ್ಲಿ 69% ಮೀಸಲಾತಿ ಇದೆ, ನಮ್ಮ ರಾಜ್ಯದಲ್ಲಿ ಕುರುಬರು, ಪಂಚಮಸಾಲಿಗಳು, ಒಕ್ಕಲಿಗರು ಮತ್ತು ಇತರೇ ಸಮುದಾಯಗಳೂ ಮೀಸಲಾತಿ ಕೇಳುತ್ತಿದ್ದಾರೆ, ಈ ಸಮುದಾಯಗಳ ಜನಸಂಖ್ಯೆಗೆ ಅನುಸಾರ ಮೀಸಲಾತಿ ಹೆಚ್ಚಿಸಲಿ ಅಂತ ಒತ್ತಾಯ ಮಾಡುತ್ತೇನೆ ಎಂದು ಡಿವಿಎಸ್ ತಿಳಿಸಿದ್ದಾರೆ.

- Advertisement -

Latest News

error: Content is protected !!