Tuesday, June 23, 2026
Homeತಾಜಾ ಸುದ್ದಿಡಿಕೆಶಿ ಸಿಎಂ ಹುದ್ದೆಯನ್ನು ಸಿದ್ಧರಾಮಯ್ಯ ಅವರಿಂದ ಕಿತ್ತುಕೊಂಡಿದ್ದಾರೆ; ಆರ್ ಅಶೋಕ್

ಡಿಕೆಶಿ ಸಿಎಂ ಹುದ್ದೆಯನ್ನು ಸಿದ್ಧರಾಮಯ್ಯ ಅವರಿಂದ ಕಿತ್ತುಕೊಂಡಿದ್ದಾರೆ; ಆರ್ ಅಶೋಕ್

- Advertisement -
- Advertisement -

ಭಟ್ಕಳ: ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಯನ್ನು ಒದ್ದು ಕಿತ್ತುಕೊಂಡಿರುವುದೇ ವಿನಃ ಸಿದ್ದರಾಮಯ್ಯನವರು ಅದನ್ನು ಸ್ವಇಚ್ಛೆಯಿಂದ ಬಿಟ್ಟುಕೊಟ್ಟಿಲ್ಲ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ತಿಳಿಸಿದ್ದಾರೆ.

ಭಟ್ಕಳದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಕಳೆದ ಹಲವಾರು ತಿಂಗಳುಗಳಿಂದ ಈ ಹುದ್ದೆಗಾಗಿ ನಿರಂತರ ಪ್ರಯತ್ನ ಪಡುತ್ತಲೇ ಇದ್ದು, ಕೊನೆಗೆ ಏಕಾಎಕಿ ಒತ್ತಡದ ಮೂಲಕ ಅದನ್ನು ಪಡೆದುಕೊಂಡಿದ್ದಾರೆ ಎಂದರು.

ಇದೇ ವೇಳೆ, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಇನ್ನೂ ಸ್ವಲ್ಪ ಕಾಲಾವಕಾಶ ಕೋರುತ್ತಲೇ ಬಂದಿದ್ದರೂ ಸಹ, ಶಿವಕುಮಾರ್ ಅವರು ಹೈಕಮಾಂಡ್ ಮೇಲೆ ತೀವ್ರ ಒತ್ತಡ ಹೇರಿ ಈ ಹುದ್ದೆಯನ್ನು ದಕ್ಕಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

- Advertisement -

Latest News

error: Content is protected !!