Monday, April 29, 2024
Homeತಾಜಾ ಸುದ್ದಿಬೆಂಗಳೂರು ವಾಹನ ಸವಾರರಿಗೆ ಗುಡ್ ನ್ಯೂಸ್ ; ವಿನಾಕಾರಣ ವಾಹನ ತಡೆದು ಪರಿಶೀಲನೆ ನಡೆಸುವಂತಿಲ್ಲ -...

ಬೆಂಗಳೂರು ವಾಹನ ಸವಾರರಿಗೆ ಗುಡ್ ನ್ಯೂಸ್ ; ವಿನಾಕಾರಣ ವಾಹನ ತಡೆದು ಪರಿಶೀಲನೆ ನಡೆಸುವಂತಿಲ್ಲ – ಡಿಜಿಪಿ ಪ್ರವೀಣ್ ಸೂದ್ ಸೂಚನೆ

spot_img
- Advertisement -
- Advertisement -

ಬೆಂಗಳೂರು: ಡಿಜಿಪಿ ಪ್ರವೀಣ್ ಸೂದ್ ಅವರು ಬೆಂಗಳೂರು ನಗರ ಟ್ರಾಫಿಕ್ ಪೊಲೀಸರಿಗೆ ಕಡಕ್ ಸೂಚನೆ ನೀಡಿದ್ದಾರೆ,ಹೌದು ಸಿಲಿಕಾನ್ ಸಿಟಿಯಲ್ಲಿ ಇನ್ಮುಂದೆ ತಪಾಸಣೆ ನೆಪದಲ್ಲಿ ರಸ್ತೆಯ ಎಲ್ಲೆಂದರಲ್ಲಿ ಸುಮ್ ಸುಮ್ಮೆ ವಾಹನ ತಡೆದು ಪರಿಶೀಲನೆ ನಡೆಸುವಂತಿಲ್ಲ ಎಂದಿದ್ದಾರೆ.


ದಾಖಲೆ ಪರಿಶೀಲನೆ ನೆಪದಲ್ಲಿ ಕಾರು ಮಾಲೀಕರೊಬ್ಬರಿಂದ ಹಣ ವಸೂಲಿ ಆರೋಪದಡಿ ಹಲಸೂರು ಗೇಟ್ ಪೊಲೀಸ್ ಠಾಣೆಯ ಎಎಸ್‌ಐ ಮತ್ತು ಮುಖ್ಯಪೇದೆಯನ್ನು ಅಮಾನತು ಮಾಡಲಾಗಿದೆ. ಇನ್ನು ಈ ಹಿಂದೆ ಅಷ್ಟೇ ಜನರು ಬೇಕಂತಲೇ ಎಲ್ಲೆಂದರಲ್ಲಿ ವಾಹನ ತಡೆದು ತಪಾಸಣೆ ಮಾಡಲಾಗ್ತಿದೆ ಎಂದು ಟ್ವಿಟ್ ಮಾಡಿ ದೂರು ದಾಖಲಿಸಿದ್ದರು.


ಇದಕ್ಕೆ ಉತ್ತರಿಸಿದ ಡಿಜಿಪಿ, ಡ್ರಿಂಕ್ ಆಯಂಡ್ ಡ್ರೈವ್ ಮತ್ತು ರೂಲ್ಸ್ ಬ್ರೇಕ್ ಮಾಡುವ ವಾಹನಗಳ ಮೇಲೆ ಟ್ರಾಫಿಕ್ ಪೊಲೀಸರು ನಿಗಾ ಇಡಬೇಕು.ಸಂಚಾರ ನಿಯಮ ಕಣ್ಣಿಗೆ ಕಂಡರೆ ವಾಹನ ತಡೆದು ತಪಾಸಣೆ ಮಾಡಿ. ಆದರೆ ತಪಾಸಣೆ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡಬಾರದು ಎಂದಿದ್ದಾರೆ.


ದಾಖಲೆಗಳ ಪರಿಶೀಲನೆ ವಿಷಯದಲ್ಲಿ ನಿಯಮ ಉಲ್ಲಂಘನೆ ಆಗಿದ್ದಲ್ಲಿ ಸ್ಥಳ, ದಿನಾಂಕ ಹಾಗೂ ಸಮಯ ತಿಳಿಸಿ.ನಾವು ಕೂಡಲೇ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ.

- Advertisement -
spot_img

Latest News

error: Content is protected !!