Thursday, June 4, 2026
Homeಕರಾವಳಿಕಡಬ : ತೆಂಗಿನಕಾಯಿ ತೆಗೆಯುವಾಗ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

ಕಡಬ : ತೆಂಗಿನಕಾಯಿ ತೆಗೆಯುವಾಗ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

- Advertisement -
- Advertisement -

ಕಡಬ : ತೆಂಗಿನಕಾಯಿ ತೆಗೆಯುವಾಗ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ಠಾಣಾ ವ್ಯಾಪ್ತಿಯ ಕೋಡಿಂಬಾಳ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.

ಕೊಡಿಂಬಾಳ ಕೊಡೆಂಕೇರಿ ನಿವಾಸಿ ತೋಮಸ್ (63) ಮೃತ ದುರ್ದೈವಿ. ಅವರು ತನ್ನ ಮನೆಯಲ್ಲಿ ತೆಂಗಿನಕಾಯಿ ಕೊಯ್ಯುತ್ತಿದ್ದ ವೇಳೆ ಅಲ್ಯೂಮಿನಿಯಂ ಕೊಕ್ಕೆ ವಿದ್ಯುತ್ ತಂತಿಗೆ ತಾಗಿ ಈ ದುರ್ಘಟನೆ ಸಂಭವಿಸಿದೆ . ಸ್ಥಳಕ್ಕೆ ಕಡಬ ಠಾಣಾಧಿಕಾರಿ ಆಂಜನೇಯ ರೆಡ್ಡಿ, ಮೆಸ್ಕಾಂ ಎಇಟಿ ಸಜಿಕುಮಾರ್, ಮೆಸ್ಕಾಂ ಎಇಇ ಸತ್ಯನಾರಾಯಣ, ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು , ಈ ಸಂಬಂಧ ಪ್ರಕರಣ ದಾಖಲಾಗಿದೆ‌

- Advertisement -

Latest News

error: Content is protected !!