Sunday, May 12, 2024
Homeಕರಾವಳಿಸುಳ್ಯ: ಪ.ಜಾತಿ ಕಾಲನಿಗೆ ಮಂಜೂರಾದ ಶೌಚಾಲಯ ನಿರ್ಮಾಣ ಸ್ಥಳ ಬದಲಾವಣೆಗೆ ಪ್ರತಿಭಟನೆ

ಸುಳ್ಯ: ಪ.ಜಾತಿ ಕಾಲನಿಗೆ ಮಂಜೂರಾದ ಶೌಚಾಲಯ ನಿರ್ಮಾಣ ಸ್ಥಳ ಬದಲಾವಣೆಗೆ ಪ್ರತಿಭಟನೆ

spot_img
- Advertisement -
- Advertisement -

ಸುಳ್ಯ: ಸ್ವಚ್ಛಭಾರತ ಮಿಷನ್ ಯೋಜನೆ ಅಡಿಯಲ್ಲಿ ಸುಳ್ಯ ಕೊಡಿಯಾಲ ಬೈಲು ದಲಿತರ ಕಾಲೋನಿಗೆ ಬಂದ ಶೌಚಾಲಯ ಮತ್ತು ಸ್ನಾನ ಘಟಕದ ಸಂಕೀರ್ಣ ಕಟ್ಟಡವನ್ನು ಕೊಡಿಯಾಲಬೈಲು ಹಿಂದೂ ರುದ್ರಭೂಮಿ ಒಳಗಡೆ ಮಾಡಿದ್ದಾರೆ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಆರೋಪಿಸಲಾಗಿದೆ.


ಇದರ ಬಗ್ಗೆ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಸುಂದರ ಪಾಟಾಜೆ, ಹಾಗೂ ಸುಳ್ಯ ತಾಲೂಕು ಸಂಘದ ಅಧ್ಯಕ್ಷ ಪದಾಧಿಕಾರಿಗಳು, ಸ್ಥಳೀಯ ನಿವಾಸಿಗಳನ್ನು ಸೇರಿಸಿ ಇಂದು ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುಂದರ ಪಾಟಾಜೆ ಸರಕಾರದಿಂದ ದಲಿತ ಸಮುದಾಯದ ಕಾಲೋನಿಗೆ ಬಂದಿರುವಂತಹ ಅನುದಾನ ಬೇರೆಡೆ ವರ್ಗಾಯಿಸಿ ನಮ್ಮ ಸಮುದಾಯ ದವರಿಗೆ ಅನ್ಯಾಯ ಮಾಡಿದ್ದಾರೆ.
ಇದರ ಬಗ್ಗೆ ಮುಖ್ಯಮಂತ್ರಿಯವರ ಕಚೇರಿಯಿಂದ ಕ್ರಮ ಕೈಗೊಳ್ಳುವಂತೆ ಇಲ್ಲಿಯ ಅಧಿಕಾರಿಗಳಿಗೆ ಪತ್ರ ಬಂದಿದ್ದರು ಅದರ ಬಗ್ಗೆ ಯಾವುದೇ ಕ್ರಮವನ್ನು ಇವರು ಕೈಗೊಳ್ಳುತ್ತಿಲ್ಲ. ಆದ್ದರಿಂದ ನಮಗೆ ನ್ಯಾಯ ಸಿಗುವವರೆಗೆ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಹೇಳಿದರು.

ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಮೋಹನ್ ಕುಮಾರ್ ಅಡಬಳೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ನಮ್ಮಸಮುದಾಯ ದವರಿಗೆ ಅನ್ಯಾಯವಾದರೆ ನಾವು ಸುಮ್ಮನಿರು ವುದಿಲ್ಲ.ಕಾಲೋನಿ ಅವರಿಗೆ ಇದರ ಮಾಹಿತಿ ಇರುವುದಿಲ್ಲ ಎಂದು ಅವರನ್ನು ಮೋಸ ಮಾಡಿದ್ದಾರೆ. ಇದನ್ನು ನಾವು ಬಿಡುವುದಿಲ್ಲ ಎಂದು ಹೇಳಿದರು.
ಕೊಡಿಯಾಲ ಬೈಲು ನಿವಾಸಿಗಳು ತಮ್ಮತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ನ್ಯಾಯ ಬೇಕೆಂದು ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆ ಯ ಜಿಲ್ಲಾ ಸಂಚಾಲಕ ಪರಮೇಶ್ವರ ಕೆಮ್ಮಿಂಜೆ, ಸಂಘಟನೆಯ ಮುಖಂಡರುಗಳಾದ ರಮೇಶ್ ಕೊಡಂಕೇರಿ, ಉದಯಕುಮಾರ್, ರಾಜೇಶ್ ಕೊಡಿಯಾಲಬೈಲು, ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಅಧ್ಯಕ್ಷ ಸತೀಶ್ ಬೂಡು ಮಕ್ಕಿ, ಆನಂದ ನ್ಯಾಕ್ ರಂಗತಮಲೆ,ಬಾಲಚಂದ್ರ ಅಡ್ಯಾರ್, ಚೆನ್ನಕೇಶವ ನ್ಯಾಕ್, ಗಣೇಶ ಪಿ, ಹಾಗೂ ಕಾಲೋನಿ ನಿವಾಸಿಗಳಾದ ತಂಗುಂನ್ನಿ, ಹೇಮಾವತಿ, ಗಿರಿಜಾ, ಮಾಲತಿ, ಪೂವಮ್ಮಮೊದಲಾದವರು ಭಾಗವಹಿಸಿದ್ದರು.

- Advertisement -
spot_img

Latest News

error: Content is protected !!