Friday, May 17, 2024
Homeತಾಜಾ ಸುದ್ದಿಮೋದಿ ಮೈಸೂರಿಗೆ ಆಗಮಿಸಿದ ಬಳಿಕ ದುಪ್ಪಟ್ಟಾಗಿದೆ ಅರಮನೆಗೆ ಬರುವವರ ಸಂಖ್ಯೆ

ಮೋದಿ ಮೈಸೂರಿಗೆ ಆಗಮಿಸಿದ ಬಳಿಕ ದುಪ್ಪಟ್ಟಾಗಿದೆ ಅರಮನೆಗೆ ಬರುವವರ ಸಂಖ್ಯೆ

spot_img
- Advertisement -
- Advertisement -

ಮೈಸೂರು: ಅಂತರಾಷ್ಟ್ರೀಯ ಯೋಗ ದಿನಕ್ಕೆ ಪ್ರಧಾನಿ ಮೋದಿ ಮೈಸೂರಿಗೆ ಆಗಮಿಸಿದ ನಂತರ ಸಾಂಸ್ಕೃತಿಕ ನಗರಿಗೆ ಬರುವ ಪ್ರವಾಸಿಗರ ಸಂಖ್ಯೆ ದುಪ್ಪಟಾಗಿದೆ. ಹಿಂದೆ ತಿಂಗಳಿಗೆ ಸುಮಾರು 6 ರಿಂದ 7 ಸಾವಿರ ಮಂದಿ ಅರಮನೆ ಜಾಲತಾಣಕ್ಕೆ ಭೇಟಿ ನೀಡುತ್ತಿದ್ದರು. ಆದರೆ, ಅರಮನೆಯಲ್ಲಿ ಯೋಗ ಕಾರ್ಯಕ್ರಮದ ಬಳಿಕ ಈ ಸಂಖ್ಯೆ ಬಹುತೇಕ ದುಪ್ಪಟ್ಟಾಗಿದೆ. ಅದರಲ್ಲೂ ಪ್ರಧಾನಿಯವರು ಯೋಗ ಅಭ್ಯಾಸ ಮಾಡಿದ ಮಾರನೇ ದಿನ ಅಂದರೆ ಜೂನ್ 22 ರಂದು 3 ಸಾವಿರ, 23ರಂದು 3,400 ಮಂದಿ ವೀಕ್ಷಿಸಿರುವುದು ದಾಖಲೆಯಾಗಿದೆ.

ಇನ್ನು ಕಳೆದ ಎರಡು ವರ್ಷದಲ್ಲಿ ಕೊರೊನಾ ಕಾರಣದಿಂದ ಮನೆಯಲ್ಲೇ ಯೋಗ ಕಲಿಯುತ್ತಿದ್ದ ಪಟುಗಳು ಹಾಗೂ ಆಸಕ್ತರು ಇದೀಗ ತರಬೇತಿ ಕೇಂದ್ರಗಳ ಮೊರೆ ಹೋಗಿದ್ದಾರೆ. ಅದರಲ್ಲೂ ಮೋದಿ ಬಂದು ಹೋದ ಮೇಲೆ ನಿತ್ಯ ಯೋಗಕೇಂದ್ರಗಳಿಗೆ ಬರುವವರ ಸಂಖ್ಯೆ ಮೊದಲಿಗಿಂತಲೂ ಶೇ.30ರಷ್ಟು ಹೆಚ್ಚಾಗಿದೆ.

ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಭೇಟಿ ನೀಡಿದ ನಂತರ ವೆಬ್‌ಸೈಟ್ ವೀಕ್ಷಿಸಿರುವವರ ಪೈಕಿ ಶೇ 90ರಷ್ಟು ಮಂದಿ ಅರಮನೆಗೆ ಗರಿಷ್ಠ 5 ಸ್ಟಾರ್ ನೀಡಿ ಮೆಚ್ಚುಗೆ ವ್ಯಕ್ತಪಪಡಿಸಿದ್ದಾರೆ. ಈ ಸಾಲಿನಲ್ಲಿ ವಿದೇಶಿಗರೇ ಹೆಚ್ಚಿರುವುದು ಮತ್ತೊಂದು ವಿಶೇಷ. ಇನ್ನು ಕೆಲವರು ಅರಮನೆಯ ವಿನ್ಯಾಸ, ಕಂಬಗಳ ಕೆತ್ತನೆ, ವಿಶಿಷ್ಟ ಪೇಂಟಿಂಗ್ ಹಾಗೂ ಸೌಂದರ್ಯದ ಬಗ್ಗೆಯೂ ಮೆಚ್ಚುಗೆಯ ಸಾಲುಗಳನ್ನು ಬರೆದಿದ್ದಾರೆ.

- Advertisement -
spot_img

Latest News

error: Content is protected !!