Saturday, June 6, 2026
Homeತಾಜಾ ಸುದ್ದಿಲೈಂಗಿಕ ದೌರ್ಜನ್ಯದ ಆರೋಪ: ಮಲಯಾಳಂ ನಟ, ನಿರ್ಮಾಪಕ ವಿಜಯ್ ಬಾಬು ಅರೆಸ್ಟ್‌

ಲೈಂಗಿಕ ದೌರ್ಜನ್ಯದ ಆರೋಪ: ಮಲಯಾಳಂ ನಟ, ನಿರ್ಮಾಪಕ ವಿಜಯ್ ಬಾಬು ಅರೆಸ್ಟ್‌

- Advertisement -
- Advertisement -

ಕೊಚ್ಚಿನ್ : ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಮಲಯಾಳಂ ನಟ ಮತ್ತು ನಿರ್ಮಾಪಕ ವಿಜಯ್ ಬಾಬು ಅವರನ್ನು ಇಂದು ಬಂಧಿಸಲಾಗಿದೆ.

ಸಿನಿಮಾಗಳಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ನಟಿಯೊಬ್ಬರು ನಟ ವಿಜಯ್ ಬಾಬು ವಿರುದ್ಧ ದೂರು ನೀಡಿದ್ದು ಇದರಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ವಿಚಾರಣೆಗೆಂದು ಎರ್ನಾಕುಲಂ ಸೌತ್ ಪೊಲೀಸ್ ಠಾಣೆಗೆ ಹಾಜರುಪಡಿಸಿದ ವೇಳೆ ವಿಜಯ್ ಬಾಬು ಅವರನ್ನು ಬಂಧಿಸಲಾಗಿದೆ.

ಜೂನ್ 22ರಂದು ಅವರಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು. ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುರಸ್ಕರಿಸುವ ವೇಳೆ ಕೇರಳ ಹೈಕೋರ್ಟ್, ರಾಜ್ಯವನ್ನು ತೊರೆಯದಂತೆ ಮತ್ತು ಅವರ ಪಾಸ್‌ಪೋರ್ಟ್ ಸಲ್ಲಿಸುವಂತೆ ಹೇಳಿದೆ. ಸೋಮವಾರದಿಂದ ಜುಲೈ 3ರವರೆಗೆ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ವಿಚಾರಣೆ ನಡೆಸಲು ತನಿಖಾ ತಂಡಕ್ಕೆ ಅನುಮತಿ ನೀಡಲಾಗಿದೆ. ನಿನ್ನೆಯಷ್ಟೇ ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (ಅಮ್ಮ) ಅವರಿಗೆ ಬೆಂಬಲವನ್ನು ನೀಡಿತ್ತು.

- Advertisement -

Latest News

error: Content is protected !!