Thursday, June 4, 2026
Homeತಾಜಾ ಸುದ್ದಿಸ್ಪಾ ಮಾಲೀಕನಿಗೆ ಬೆದರಿಸಿ ಸುಲಿಗೆ ಪ್ರಕರಣ;  ದಿವ್ಯಾ ವಸಂತ ಬಂಧನ

ಸ್ಪಾ ಮಾಲೀಕನಿಗೆ ಬೆದರಿಸಿ ಸುಲಿಗೆ ಪ್ರಕರಣ;  ದಿವ್ಯಾ ವಸಂತ ಬಂಧನ

- Advertisement -
- Advertisement -

ಬೆಂಗಳೂರು; ಸ್ಪಾ ಮಾಲೀಕನಿಗೆ ಬೆದರಿಸಿ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿದ್ದ ರೀಲ್ಸ್ ರಾಣಿ  ದಿವ್ಯಾ ವಸಂತ ಕೊನೆಗೂ ಅರೆಸ್ಟ್ ಆಗಿದ್ದಾಳೆ,

ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ದಿವ್ಯಾಳನ್ನು ಬೆಂಗಳೂರಿನ ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದು ವಾರದಿಂದ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸುತ್ತಿದ್ದ ದಿವ್ಯಾಳನ್ನು ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. ಆರಂಭದಲ್ಲಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ದಿವ್ಯಾ ಬಳಿಕ ಕೇರಳದಲ್ಲಿ ತಲೆಮರೆಸಿಕೊಂಡಿದ್ದಳು.

ಈಗಾಗಲೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣದ ಕಿಂಗ್ ಪಿನ್ ವೆಂಕಟೇಶ್, ದಿವ್ಯ ಸಹೋದರ ಸಂದೇಶ್ ಹಾಗೂ ಆಕಾಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

Latest News

error: Content is protected !!