Tuesday, October 13, 2026
Homeಉತ್ತರ ಕನ್ನಡಶಿರೂರು ಭೂ ಕುಸಿತ ರಕ್ಷಣಾ ಕಾರ್ಯಾಚರಣೆಗೆ ತೆರಳಿದ್ದ ಉಡುಪಿಯ ಮುಳುಗು ತಜ್ಞನಿಗೆ ಗಾಯ

ಶಿರೂರು ಭೂ ಕುಸಿತ ರಕ್ಷಣಾ ಕಾರ್ಯಾಚರಣೆಗೆ ತೆರಳಿದ್ದ ಉಡುಪಿಯ ಮುಳುಗು ತಜ್ಞನಿಗೆ ಗಾಯ

- Advertisement -
- Advertisement -

ಅಂಕೋಲಾ: ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಸಂಭವಿಸಿರುವ ಭೂ ಕುಸಿತದಿಂದಾಗಿ ಗಂಗಾವಳಿ ನದಿಯಲ್ಲಿ ಮುಳುಗಿರುವ ಟ್ರಕ್ ಮೇಲೆತ್ತಲು ಇಳಿದಿದ್ದ ಮುಳುಗು ತಜ್ಞರೊಬ್ಬರಿಗೆ ಗಾಯವಾಗಿದೆ.

ನದಿಯಲ್ಲಿ ಡೈವ್ ಮಾಡುವ ವೇಳೆಯಲ್ಲಿ ನೀರಿನ ರಭಸಕ್ಕೆ ನದಿಯೊಳಗಿದ್ದ ಕಲ್ಲು ತಾಗಿ ದೀಪು ಎಂಬ ಮುಳುಗು ತಜ್ಞ ಗಾಯಗೊಂಡಿದ್ದಾರೆ.ಎದೆಯ ಭಾಗಕ್ಕೆ ಗಾಯವಾಗಿರುವ ದೀಪು ಅವರನ್ನು ಅಂಕೋಲಾದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಭೂ ಕುಸಿತವಾದಾಗ ಟ್ರಕ್ ಸಮೇತ ನದಿಗೆ ಬಿದ್ದಿರುವ ಚಾಲಕ ಅರ್ಜುನ್ ಅವರನ್ನು ಮೇಲೆತ್ತಲು ಇಂದು ಉಡುಪಿಯಿಂದ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡದೊಂದಿಗೆ ದೀಪು ಶಿರೂರಿಗೆ ಬಂದಿದ್ದರು.ಭೂ ಕುಸಿತವಾಗಿರುವ ಶಿರೂರಿನಲ್ಲಿ ಕಳೆದ ಹತ್ತು ದಿನಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

- Advertisement -

Latest News

error: Content is protected !!