- Advertisement -
![]()
- Advertisement -
ಬಂಟ್ವಾಳ : ಹಫ್ತಾಕ್ಕಾಗಿ ಉದ್ಯಮಿಗಳಿಗೆ ಬೆದರಿಕೆ ಹಾಕಿದ ಮೂವರ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಖಾಲಿದ್ ನಂದಾವರ, ಇಕ್ಬಾಲ್ ಮತ್ತು ಮತ್ತೋರ್ವ ಹಫ್ತಾಕ್ಕಾಗಿ ಬೆದರಿಕೆಯೊಡ್ಡಿರುವ ಆರೋಪಿಗಳು.
ಆರೋಪಿಗಳು ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದಲ್ಲಿ ಉದ್ಯಮಿಗಳು ಗಣಿ ಇಲಾಖೆಯ ಪರವಾನಿಗೆ ಪಡೆದು ಕಾನೂನು ಬದ್ಧವಾಗಿ ಗಣಿಗಾರಿಕೆ ನಡೆಸುತ್ತಿರುವ ಸ್ಥಳಕ್ಕೆ ಆಗಮಿಸಿ ಅಲ್ಲಿದ್ದ ಲಾರಿ ಚಾಲಕ, ಹಿಟಾಚಿ ಚಾಲಕ, ಮಾಲೀಕರಿಗೆ ಪ್ರತೀ ಟ್ರಿಪ್ ಲಾರಿಗೆ 500 ರೂ. ಇಲ್ಲವೇ ಒಂದು ಸಾವಿರ ರೂ. ಕೊಡಬೇಕು, ಇಲ್ಲದಿದ್ದಲ್ಲಿ ಗಣಿ ಇಲಾಖೆ, ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಇಡೀ ಉದ್ಯಮವನ್ನೇ ನಿಲ್ಲಿಸುವುದಾಗಿ ಖಾಲಿದ್ ನಂದಾವರ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಅಲ್ಲದೇ ಮೊಬೈಲ್‌ನಲ್ಲಿ ವಾಯ್ಸ್ ಮೆಸೇಜ್ ಮೂಲಕವೂ ಆರೋಪಿಗಳು ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
- Advertisement -


