Monday, April 29, 2024
Homeತಾಜಾ ಸುದ್ದಿಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ; ದಕ್ಷಿಣಕನ್ನಡ, ಉಡುಪಿ ಉಸ್ತುವಾರಿ ಯಾರ...

ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ; ದಕ್ಷಿಣಕನ್ನಡ, ಉಡುಪಿ ಉಸ್ತುವಾರಿ ಯಾರ ಹೆಗಲಿಗೆ?

spot_img
- Advertisement -
- Advertisement -

ಬೆಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಐತಿಹಾಸಿಕ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ ಸರ್ಕಾರ ರಚನೆಯಲ್ಲಿಯ ಆರಂಭದಲ್ಲೇ ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಹೈಕಮಾಂಡ್‌ ನಾಯಕರ ಸಮ್ಮುಖದಲ್ಲಿ ಎಲ್ಲಾ ಗೊಂದಲಗಳಿಗೂ ತೆರೆ ಬಿದ್ದಿತ್ತು.

ಬಳಿಕ ನೂತನ ಸಚಿವರಿಗೆ ಖಾತೆ ಹಂಚಿಕೆಯನ್ನೂ ಸಹ ಹೈಕಮಾಂಡ್​ ಮಟ್ಟದಲ್ಲಿ ಚರ್ಚಿಸಿ ಹಂಚಲಾಗಿತ್ತು. ಇದೀಗ ತೀವ್ರ ಕುತೂಹಲ ಮೂಡಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ನೇಮಕ ಮಾಡಲಾಗಿದೆ. ಹಾಗಾದ್ರೆ, ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ ನೋಡಿ.

  • ಬೆಂಗಳೂರು ನಗರ ಉಸ್ತುವಾರಿ ಸಚಿವ- ಡಿ.ಕೆ.ಶಿವಕುಮಾರ್​
  • ತುಮಕೂರು ಜಿಲ್ಲಾ ಉಸ್ತುವಾರಿ-ಡಾ.ಜಿ.ಪರಮೇಶ್ವರ್​
  • ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹೆಚ್​.ಕೆ.ಪಾಟೀಲ್
  • ಬೆಂಗಳೂರು ಗ್ರಾಮಾಂತರ-ಕೆ.ಹೆಚ್​.ಮುನಿಯಪ್ಪ
  • ರಾಮಲಿಂಗಾರೆಡ್ಡಿ-ರಾಮನಗರ
  • ಕೆ.ಜೆ.ಜಾರ್ಜ್​-ಚಿಕ್ಕಮಗಳೂರು
  • ಎಂ.ಬಿ.ಪಾಟೀಲ್​-ವಿಜಯಪುರ
  • ದಿನೇಶ್ ಗುಂಡೂರಾವ್​-ದಕ್ಷಿಣ ಕನ್ನಡ
  • ಹೆಚ್​.ಸಿ.ಮಹದೇವಪ್ಪ-ಮೈಸೂರು,
  • ಸತೀಶ್ ಜಾರಕಿಹೊಳಿ-ಬೆಳಗಾವಿ
  • ಪ್ರಿಯಾಂಕ್​ ಖರ್ಗೆ-ಕಲಬುರಗಿ
  • ಶಿವಾನಂದಪಾಟೀಲ್-ಹಾವೇರಿ
  • ಜಮೀರ್​ ಅಹ್ಮದ್ ಖಾನ್​​-ವಿಜಯನಗರ
  • ಶರಣಬಸಪ್ಪ ದರ್ಶನಾಪುರ-ಯಾದಗಿರಿ
  • ಈಶ್ವರ್ ಖಂಡ್ರೆ-ಬೀದರ್,
  • ಚಲುವರಾಯಸ್ವಾಮಿ-ಮಂಡ್ಯ
  • ಎಸ್​.ಎಸ್​.ಮಲ್ಲಿಕಾರ್ಜುನ್​-ದಾವಣಗೆರೆ
  • ಸಂತೋಷ್ ಲಾಡ್-ಧಾರವಾಡ
  • ಶರಣಪ್ರಕಾಶ್ ಪಾಟೀಲ್​-ರಾಯಚೂರು
  • ಆರ್​.ಬಿ.ತಿಮ್ಮಾಪುರ-ಬಾಗಲಕೋಟೆ
  • ಕೆ.ವೆಂಕಟೇಶ್​-ಚಾಮರಾಜನಗರ
  • ಕೊಪ್ಪಳ-ಶಿವರಾಜ್​ ತಂಗಡಗಿ
  • ಡಿ.ಸುಧಾಕರ್​-ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ
  • ಬಿ.ನಾಗೇಂದ್ರ-ಬಳ್ಳಾರಿ
  • ಕೆ.ಎನ್​.ರಾಜಣ್ಣ-ಹಾಸನ
  • ಭೈರತಿ ಸುರೇಶ್​-ಕೋಲಾರ
  • ಲಕ್ಷ್ಮೀ ಹೆಬ್ಬಾಳ್ಕರ್​-ಉಡುಪಿ
  • ಮಂಕಾಳ್ ವೈದ್ಯ-ಉತ್ತರ ಕನ್ನಡ
  • ಮಧು ಬಂಗಾರಪ್ಪ-ಶಿವಮೊಗ್ಗ
  • ಡಾ.ಎಂ.ಸಿ.ಸುಧಾಕರ್-ಚಿಕ್ಕಬಳ್ಳಾಪುರ
  • ಎನ್​.ಎಸ್​.ಬೋಸರಾಜು-ಕೊಡಗು ಜಿಲ್ಲಾ

ಇದರಲ್ಲಿ ಪ್ರಮುಖ ಅಂಶ ಅಂದರೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ರಾಮನಗರ ಬಿಟ್ಟು ಬೆಂಗಳೂರು ಜಿಲ್ಲಾ ಉಸ್ತುವಾರಿ ನೀಡಲಾಗಿದೆ. ಇನ್ನು ರಾಮನಗರ ಜಿಲ್ಲಾ ಉಸ್ತುವಾರಿಯನ್ನು ರಾಮಲಿಂಗಾರೆಡ್ಡಿ ಅವರಿಗೆ ವಹಿಸಲಾಗಿದೆ.

- Advertisement -
spot_img

Latest News

error: Content is protected !!