Tuesday, May 14, 2024
Homeಕರಾವಳಿದಕ್ಷಿಣಕನ್ನಡ: ಜಿಲ್ಲಾ ಪತ್ರಕರ್ತರ ಸಂಘಕ್ಕೆ ನಾಳ ಅಚ್ಚರಿಯ ಎಂಟ್ರಿ, ಭುವನೇಶ್, ಕಲ್ಲಪ್ಪಳ್ಳಿಗೆ ಒಲಿದ ಅದೃಷ್ಟ

ದಕ್ಷಿಣಕನ್ನಡ: ಜಿಲ್ಲಾ ಪತ್ರಕರ್ತರ ಸಂಘಕ್ಕೆ ನಾಳ ಅಚ್ಚರಿಯ ಎಂಟ್ರಿ, ಭುವನೇಶ್, ಕಲ್ಲಪ್ಪಳ್ಳಿಗೆ ಒಲಿದ ಅದೃಷ್ಟ

spot_img
- Advertisement -
- Advertisement -

ದಕ್ಷಿಣಕನ್ನಡ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸುಸೂತ್ರವಾಗಿ ನಡೆದಿದ್ದು, ದ.ಕ ಜಿಲ್ಲೆಯಲ್ಲೂ ಶೇ.97ರಷ್ಟು ಮತದಾನ ನಡೆದಿದೆ

ಈ ಮತದಾನದಲ್ಲಿ ಜಿಲ್ಲೆಯ ಗ್ರಾಮಾಂತರ ಭಾಗವೇ ನಿರ್ಣಾಯಕವಾಗಿ ಮೂಡಿ ಬಂದಿದ್ದು, ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ಘೋಷಣೆಯೊಂದೇ ಬಾಕಿಯಾಗಿದೆ.

ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ವಿಜಯವಾಣಿ ವರದಿಗಾರ ಶ್ರವಣ್ ಕುಮಾರ್ ನಾಳ ಮೊದಲಬಾರಿಗೆ ಕಾರ್ಯಕಾರಿ ಸದಸ್ಯರಾಗಿ ಜಿಲ್ಲಾ ಸಂಘಕ್ಕೆ ಪ್ರವೇಶವನ್ನು ಪಡೆದಿದ್ದಾರೆ. ಕಾರ್ಯದರ್ಶಿಯಾಗಿ ಬೆಳ್ತಂಗಡಿಯ ಹಿರಿಯ ಪತ್ರಕರ್ತ ಹಾಗೂ ವಿಜಯಕರ್ನಾಟಕ ವರದಿಗಾರ ಭುವನೇಶ್ ಜಿ ಹಾಗೂ ಸುಳ್ಯದದ ಮಳಿಯಾಲಂ ಮನೋರಮ ಪತ್ರಿಕೆ ವರದಿಗಾರ ಗಂಗಾಧರ್ ಕಲ್ಲಪಳ್ಳಿಗೆ ಅದೃಷ್ಟ ಒಲಿದಿದೆ.

ಈ ಬಾರಿಯ ಚುನಾವಣೆಯಲ್ಲಿ ಗ್ರಾಮಾಂತರ ಭಾಗವಾದ ಕಡಬ, ಉಪ್ಪಿನಂಗಡಿ, ಬಂಟ್ವಾಳ, ಸುಳ್ಯ, ಪುತ್ತೂರು, ಬೆಳ್ತಂಗಡಿಯ ಮತಗಳು ಜಿಲ್ಲಾ ಸಂಘದ ಸಂಘದ ಲೆಕ್ಕಾಚಾರಗಳನ್ನೇ ತಲೆಕೆಳಗಾಗಿ ಮಾಡಿದೆ. ಈ ಮೂಲಕ ರಾಜ್ಯದ ನ.1 ಪತ್ರಕರ್ತರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶ್ರೀನಿವಾಸ್ ಇಂದಾಜೆ ಅಧ್ಯಕ್ಷತೆಯ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಗ್ರಾಮೀಣ ಭಾಗದಿಂದ ಈ ಬಾರಿ ಒಬ್ಬ ಯುವ ಪತ್ರಕರ್ತ ಹಾಗೂ ಇಬ್ಬರು ಹಿರಿಯ ಪತ್ರಕರ್ತರಿಗೆ ಪ್ರವೇಶದ ಅದೃಷ್ಟ ದೊರಕಿದೆ.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ಸಿದ್ದತೆಯಾಗುತ್ತಿದ್ದಂತೆ ಚುನಾವಣೆಗೆ ತಡೆನೀಡುವಂತೆ ಕೋರಿ ಕೆಲವರು ಕೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಕೋರ್ಟ್ ಚುನಾವಣೆಗೆ ಅವಕಾಶ ನೀಡಿ ಚುನಾವಣಾ ಪಲಿತಾಂಶ ಘೋಷಿಸದಂತೆ ತಡೆನೀಡಿದೆ. ಈ ಹಿನ್ನಲೆಯಲ್ಲಿ ಚುನಾವಣೆಯ ಸಮಗ್ರ ಮಾಹಿತಿಯನ್ನು ಕೋರ್ಟ್‌ಗೆ ಹಾಜರುಪಡಿಸಿದ ನಂತರವೇ ಅಧಿಕೃತ ಲಿತಾಂಶ ಘೋಷಣೆಯಾಗುವ ಸಾಧ್ಯತೆ ಇದೆ.

ರಾಜ್ಯದ ನ.1 ಪತ್ರಕರ್ತರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದ.ಕ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಶ್ರೀನಿವಾಸ್ ಇಂದಾಜೆ ಆಯ್ಕೆ ಬಹುತೇಕ ಖಚಿತಗೊಂಡಿದೆ. ಪ್ರಧಾನ ಕಾರ್ಯದರ್ಶಿಯಾಗಿ ಖ್ಯಾತ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಅವರ ಆಯ್ಕೆಯೂ ಪತ್ರಕರ್ತರಲ್ಲಿ ಸಂಚಲನ ಮೂಡಿಸಿದೆ.

- Advertisement -
spot_img

Latest News

error: Content is protected !!