Thursday, June 4, 2026
Homeಕರಾವಳಿಸುಳ್ಯ: ಹಿಟ್ ಆ್ಯಂಡ್ ರನ್  ಪ್ರಕರಣ, ವ್ಯಕ್ತಿ ಸಾವು !

ಸುಳ್ಯ: ಹಿಟ್ ಆ್ಯಂಡ್ ರನ್  ಪ್ರಕರಣ, ವ್ಯಕ್ತಿ ಸಾವು !

- Advertisement -
- Advertisement -

ಸುಳ್ಯ: ಇಲ್ಲಿನ ಸಂಪಾಜೆಯ ಗಡಿಕಲ್ಲು ಎಂಬಲ್ಲಿ ಹಿಟ್ ಅಂಡ್ ರನ್ ಪ್ರಕರಣದಲ್ಲಿ 60 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಸಂಪಾಜೆ ನಿವಾಸಿ ಸರೋಜ್ ಕುಮಾರ್ (60) ಮೃತರು.

ದೂರಿನ ಪ್ರಕಾರ ಸಂಪಾಜೆಯ ಕುಕ್ಕೆಟ್ಟಿ ಮನೆ ನಿವಾಸಿ ಪಿರ್ಯಾದಿದಾರರಾದ ನಾರಾಯಣ ರವರು ತಮ್ಮ ಮೋಟಾರು ಸೈಕಲ್‌ನಲ್ಲಿ ಗಡಿಕಲ್ಲು ಮೂಲಕ ಹೋಗುತ್ತಿದ್ದಾಗ ಸರೋಜ್ ಕುಮಾರ್ ಅವರು ರಸ್ತೆಬದಿಯಲ್ಲಿ ಬಿದ್ದಿದ್ದು, ಅವರ ಎಡಗಾಲಿಗೆ ತಾಗಿತ್ತು ಹಾಗೂ ದೇಹದ ಇತರ ಭಾಗಗಳಿಗೆ ಗಾಯವಾಗಿತ್ತು.

ನಾರಾಯಣ ಅವರು ಸರೋಜ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ, ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆದೊಯ್ದರು. ನಂತರ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸರೋಜ್ ಕುಮಾರ್ ಕೊನೆಯುಸಿರೆಳೆದಿದ್ದಾರೆ.

ಸರೋಜ್ ಕುಮಾರ್ ವಾಕ್ ಮಾಡಲು ಹೊರಟಿದ್ದಾಗ ವಾಹನವೊಂದು ಬಂದು ಡಿಕ್ಕಿ ಹೊಡೆದರೂ ಚಾಲಕ ಸಹಾಯ ಮಾಡದೆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.

ಪೊಲೀಸರು ಐಪಿಸಿಯ ಸೆಕ್ಷನ್ 279, 3 04(ಎ) ಮತ್ತು 134 (ಎ&ಬಿ) ಐಎಂವಿ ಕಾಯ್ದೆ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.

- Advertisement -

Latest News

error: Content is protected !!