Friday, June 26, 2026
Homeಕರಾವಳಿಜನವರಿ 9 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರವಾಸ

ಜನವರಿ 9 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರವಾಸ

- Advertisement -
- Advertisement -

ಮಂಗಳೂರು: ಜನವರಿ 9 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆಗಮಿಸಲಿದ್ದಾರೆ.

ಸಚಿವರ ಪ್ರವಾಸದ ಮಾಹಿತಿ: ಬೆಳಗ್ಗೆ 9.5 – ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ, 9:30- ನಗರದಕದ್ರಿಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯ ನೂತನ ಕಚೇರಿಯ ಉದ್ಘಾಟನಾ ಸಮಾರಂಭ, 10 ಗಂಟೆಗೆ ಲಾಲ್‌ಬಾಗ್ ಕರಾವಳಿ ಮೈದಾನದ ಎದುರು ಉಪ ಅರಣ್ಯ ಸಂರಕ್ಷಣಾಧಿಕಾರಿ ವಸತಿಗೃಹ ಶಂಕುಸ್ಥಾಪನಾ ಸಮಾರಂಭ, 11 ಗಂಟೆಗೆ ಪಿಲಿಕುಳ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಭವನದಲ್ಲಿ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ಹಕ್ಕಿ ಹಬ್ಬ 12ನೇ ಆವೃತ್ತಿ ಉದ್ಘಾಟನಾ ಕಾರ್ಯ ಕ್ರಮ, 11:45ಕ್ಕೆ ಪಡೀಲ್ ಪ್ರಜಾ ಸೌಧದಲ್ಲಿ ಆರೋಗ್ಯ ಸೇತು ಸಂಚಾರಿ ಆರೋಗ್ಯ ಘಟ ಉದ್ಘಾಟನೆ, 12:30ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನಲ್ಲಿ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ, ಲೇಡಿಗೋಶನ್‌ಆಸ್ಪತ್ರೆ ಹಾಗೂ ಕೆಎಂಸಿ ಆಸ್ಪತ್ರೆಗಳ ಜೊತೆಗಿನ ಸಹಭಾಗಿತ್ವದ ಕುರಿತು ಸಭೆ, 2:05ಕ್ಕೆ ಉಡುಪಿ ಜಿಲ್ಲೆಗೆ ತೆರಳಲಿದ್ದಾರೆ.ಜ. 10 ರಂದು ಬೆಳಿಗ್ಗೆ 11 ಗಂಟೆಗೆ ನಗರದಲ್ಲಿ ಕೋಸ್ಟಲ್ ಕರ್ನಾಟಕ ಟೂರಿಸಂ ಸಮಾವೇಶ ಸಂಜೆ 6- ನರಿಂಗಾನದಲ್ಲಿ 4ನೇ ಹೊನಲು ಬೆಳಕಿನ ಲವಕುಶ ಜೋಡುಕರೆ ಕಂಬಳ ಕಾರ್ಯಕ್ರಮ. ಜನವರಿ 11ರಂದು ಬೆಳಗ್ಗೆ 6:15ಕ್ಕೆ ಸಚಿವರು ಮಂಗಳೂರಿನಿಂದ ಬೆಂಗಳೂರಿಗೆ ತೆರಳಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

- Advertisement -

Latest News

error: Content is protected !!