Wednesday, June 3, 2026
Homeಪ್ರಮುಖ-ಸುದ್ದಿಶಿವಮೊಗ್ಗ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಮನಾ ಕಿತ್ತೂರು

ಶಿವಮೊಗ್ಗ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಮನಾ ಕಿತ್ತೂರು

- Advertisement -
- Advertisement -

ಬೆಂಗಳೂರು: ಕನ್ನಡದ ಚಿತ್ರರಂಗದ ಖ್ಯಾತ ಮಹಿಳಾ ನಿರ್ದೇಶಕಿ ಸುಮನಾ ಕಿತ್ತೂರ್ ಲಾಕ್ ಡೌನ್ ಸಮಯದಲ್ಲಿ ಬಹುಕಾಲದ ಗೆಳೆಯನೊಂದಿಗೆ ಹೊಸ ಬಾಳಿಗೆ ಎಂಟ್ರಿಕೊಟ್ಟಿದ್ದಾರೆ.

ಪಾಂಡಿಚೇರಿಯಲ್ಲಿ ಸರಳ ರೀತಿಯಲ್ಲಿ ಶ್ರೀನಿವಾಸ್ ಜೊತೆ ವಿವಾಹವಾಗಿದ್ದು, ಈಗ ಸುಮನಾ ಅವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಶಿವಮೊಗ್ಗ ಮೂಲದ ಎಂಜಿನಿಯರ್ ಶ್ರೀನಿವಾಸ್ ಮತ್ತು ಅವರ ಕುಟುಂಬ ಕೆಲ ವರ್ಷಗಳಿಂದ ಪಾಂಡಿಚೇರಿಯಲ್ಲಿ ನೆಲೆಸಿದೆ. ಮುಂದೆ ಕರ್ನಾಟಕದಲ್ಲಿ ನೆಲೆಸುವ ನಿರ್ಧಾರವನ್ನು ದಂಪತಿ ಮಾಡಿದ್ದಾರೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಕಿತ್ತೂರಿನಲ್ಲಿ ಜನಿಸಿದ ಇವರು ಕಳ್ಳರ ಸಂತೆ, ಸ್ಲಂ ಬಾಲ, ಎದೆಗಾರಿಕೆ, ಕಿರಗೂರಿನ ಗಯ್ಯಾಳಿಗಳು ಸಿನಿಮಾವನ್ನು ಸುಮನಾ ಕಿತ್ತೂರು ನಿರ್ದೇಶನ ಮಾಡಿದ್ದಾರೆ. ಕಳ್ಳರ ಸಂತೆ, ಎದೆಗಾರಿಕೆ, ಕಿರಗೂರಿನ ಗಯ್ಯಾಳಿಗಳು ಸಿನಿಮಾಗಳಿಗೆ ರಾಜ್ಯ ಪ್ರಶಸ್ತಿ ಬಂದಿದೆ.

- Advertisement -

Latest News

error: Content is protected !!