Tuesday, May 14, 2024
Homeಜ್ಯೋತಿಷ್ಯವಿಶ್ವದ ಕೊರೋನಾ ಪೀಡಿತ ರಾಷ್ಟ್ರಗಳ ಲಿಸ್ಟ್: 10ನೇ ಸ್ಥಾನಕ್ಕೇರಿದ ಭಾರತ..!

ವಿಶ್ವದ ಕೊರೋನಾ ಪೀಡಿತ ರಾಷ್ಟ್ರಗಳ ಲಿಸ್ಟ್: 10ನೇ ಸ್ಥಾನಕ್ಕೇರಿದ ಭಾರತ..!

spot_img
- Advertisement -
- Advertisement -

ನವದೆಹಲಿ: ಭಾರತದಲ್ಲಿ ಕಿಲ್ಲರ್ ಕೊರೊನಾ ವೈರಸ್ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸುತ್ತಲೇ ಇದ್ದು, ಸಾಂಕ್ರಾಮಿಕ ರೋಗದ ಪಾಸಿಟಿವ್ ಪ್ರಕರಣ ಆಘಾತಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಅಲ್ಲದೇ ವಿಶ್ವದಲ್ಲೇ ಅತಿ ಹೆಚ್ಚು ಸೋಂಕು ಮತ್ತು ಸಾವುಗಳು ಸಂಭವಿಸಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 10ನೇ ಸ್ಥಾನಕ್ಕೇರಿರುವುದು ಚಿಂತಾಜನಕ ಸಂಗತಿ. ಭಾರತದಲ್ಲಿ. ಸೋಂಕು ಪೀಡಿತರ ಸಂಖ್ಯೆ 1.32 ಲಕ್ಷಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ನಿನ್ನೆ ಒಂದೇ ದಿನ ಅಂದರೆ 24 ತಾಸುಗಳ ಅವಯಲ್ಲಿ 6,767 (ನಿನ್ನೆ 6,654, ಮೊನ್ನೆ 6,088 ಕೇಸ್) ಜನರಿಗೆ ಸೋಂಕು ದೃಢಪಟ್ಟಿದ್ದು. ಇದು ಸಾಂಕ್ರಾಮಿಕ ರೋಗ ಉಲ್ಬಣದಲ್ಲಿ ಭಾರೀ ಜಿಗಿತವಾಗಿದ್ದು, ಹೊಸ ದಾಖಲೆಯಾಗಿದೆ. ಇದೇ ಅವಧಿಯಲ್ಲಿ ಒಟ್ಟು 147 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತ ಸಂಖ್ಯೆ 3,867ಕ್ಕೇರಿದೆ

ಇದು ಸರಾಸರಿ 5500 ಪಾಸಿಟಿವ್ ಕೇಸ್ ದಾಖಲಾದ ಸತತ ಎಂಟನೆ ದಿನ. ಅಲ್ಲದೆ, ಕಳೆದ ಮೂರು ದಿನಗಳಿಂದಲೂ ನಿರಂತರವಾಗಿ 6,000ಕ್ಕೂ ಅಧಿಕ ಸೋಂಕು ಪ್ರಕರಣಗಳು ದಾಖಲಾಗಿದೆ.

ಲಾಕ್‍ಡೌನ್ ಸಡಿಲ ನಂತರ ದೇಶದ ವಿವಿಧ ರಾಜ್ಯಗಳಲ್ಲಿ ಕೊರೊನಾ ಮಹಾಸೋಟವಾಗಿದ್ದು, ಸಾವು-ಸೋಂಕು ವ್ಯಾಪಕವಾಗಿ ಉಲ್ಬಣಗೊಂಡಿದೆ. ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ಶೇ.41.28ರಷ್ಟಿದ್ದು, ನಿನ್ನೆಗೆ ಹೋಲಿಸಿದಲ್ಲಿ ಇದು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.

ಈವರೆಗೆ ಸಂಭವಿಸಿರುವ 3,867 ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿಯೇ ಮುಂದುವರಿದಿದೆ. ಆ ರಾಜ್ಯದಲ್ಲಿ ಒಟ್ಟು 1,577 ಸಾವುಗಳು ಸಂಭವಿಸಿದ್ದು, 47,190 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

ಎರಡನೇ ಸ್ಥಾನದಲ್ಲಿರುವ ಗುಜರಾತ್‍ನಲ್ಲಿ 829 ಸಾವುಗಳು ಸಂಭವಿಸಿವೆ.
ನಂತರದ ಸ್ಥಾನಗಳಲ್ಲಿ ಮಧ್ಯಪ್ರದೇಶ (281),
ಪಶ್ಚಿಮ ಬಂಗಾಳ (269)
ದೆಹಲಿ (231)
ರಾಜಸ್ತಾನ (160),
ಉತ್ತರ ಪ್ರದೇಶ (155),
ತಮಿಳುನಾಡು (103),
ಆಂಧ್ರಪ್ರದೇಶ (56),
ತೆಲಂಗಾಣ (49),
ಕರ್ನಾಟಕ(42),
ಹಾಗೂ ಪಂಜಾಬ್ (36) ರಾಜ್ಯಗಳಿವೆ.

ಜಮ್ಮು-ಕಾಶ್ಮೀರ 21, ಹರಿಯಾಣ 16, ಬಿಹಾರ 11, ಒಡಿಶಾ ಏಳು, ಕೇರಳ, ಜಾರ್ಖಂಡ್ ಮತ್ತು ಅಸ್ಸಾಂ ತಲಾ ನಾಲ್ಕು, ಚಂಡಿಗಢ, ಮತ್ತು ಹಿಮಾಚಲ ಪ್ರದೇಶ ತಲಾ ಮೂರು, ಉತ್ತರಾಖಂಡ ಎರಡು ಹಾಗೂ ಪುದುಚೇರಿ, ಮತ್ತು ಮೇಘಾಲಯ ರಾಜ್ಯಗಳಲ್ಲಿ ತಲಾ ಒಂದೊಂದು ಸಾವುಗಳು ವರದಿಯಾಗಿವೆ.

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, 73,560ರಷ್ಟಿದೆ. ಈ ಮಧ್ಯೆ, ಈವರೆಗೆ 54,440(ಚೇತರಿಕೆ ಪ್ರಮಾಣ ಶೇ.41.28) ಮಂದಿ ಗುಣಮುಖರಾಗಿದ್ದಾರೆ.

- Advertisement -
spot_img

Latest News

error: Content is protected !!